





ಪುತ್ತೂರು: ನ.5ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿಜೇತರಾದ ಕ್ರೀಡಾಳುಗಳನ್ನು ಸ್ವಾಗತಿಸಿ ಅಭಿನಂದಿಸುವ ಕಾರ್ಯಕ್ರಮ ಯಾದವಶ್ರೀ ಸಭಾಂಗಣದಲ್ಲಿ ಸಂಭ್ರಮದಿಂದ ಜರುಗಿತು.



30 ಅಕ್ಟೋಬರ್ 2025 ರಿಂದ 3 ನವೆಂಬರ್ 2025 ವರೆಗೆ ಮಂಗಳೂರು ಪಬ್ಲಿಕ್ ಶಾಲೆ, ಹಾಸನದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆಗೈದು ಸಂಸ್ಥೆಯ ಕೀರ್ತಿಯನ್ನು ಹತ್ತೂರಲ್ಲಿ ಬೆಳಗಿಸಿದ್ದಾರೆ. ಈ ವಿದ್ಯಾರ್ಥಿಗಳನ್ನು ಶಾಲಾ ವಿದ್ಯಾರ್ಥಿಗಳಿಂದ ವಾದ್ಯ ಘೋಷಗಳೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ವೇದಿಕೆಗೆ ಕರೆತಂದು ಶಾಲಾ ಶಿಕ್ಷಕಿಯರಿಂದ ಸಾಂಪ್ರದಾಯಿಕವಾಗಿ ಆರತಿಯನ್ನು ಬೆಳಗಿ ವಿಶಿಷ್ಟ ರೀತಿಯಲ್ಲಿ ಶಾಲೆಗೆ ಸ್ವಾಗತಿಸಲಾಯಿತು.





ವಿದ್ಯಾರ್ಥಿಗಳಾದ ದಿವಿಜ್ಞ ಶಿವಪ್ರಸಾದ್.ಯು.ಎ ಮತ್ತು ಪವಿತ್ರ ದಂಪತಿ ಪುತ್ರಿ) ಕ್ರೀಡಾಕೂಟದಲ್ಲಿ 100 ಇನ್ನೂರು 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿ ವೈಯುಕ್ತಿಕ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಇವರು ಡಿಸೆಂಬರ್ 12ರಿಂದ 18ರವರೆಗೆ ಉತ್ತರ ಪ್ರದೇಶದ ಲಕ್ನೌನಲ್ಲಿ ನಡೆಯಲಿರುವ ಎಸ್.ಜಿ.ಎಫ್.ಐ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾರೆ.
ನಿಧಿಶ್ರೀ (ದೇರಣ್ಣ ಗೌಡ ಮತ್ತು ಹೇಮಲತ ದಂಪತಿ ಪುತ್ರಿ) 4×100 ಮೀಟರ್ ರಿಲೇ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕದೊಂದಿಗೆ ಮುಂಬರುವ ಎಸ್.ಜಿ.ಎಫ್.ಐ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಆತ್ಮಿ.ಕೆ ಎಲ್ (ಲಕ್ಷ್ಮಣ ಗೌಡ ಮತ್ತು ಅಶ್ವಿನಿ ದಂಪತಿ ಪುತ್ರಿ) 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನವನ್ನು ಬೆಳ್ಳಿಯ ಪದಕದೊಂದಿಗೆ ಹಾಗೂ 200ಮೀಟರ್ ಓಟದಲ್ಲಿ ಕಂಚಿನ ಪದಕವನ್ನು ಗಳಿಸಿಕೊಂಡಿರುತ್ತಾರೆ. 4×100ಮೀಟರ್ ರಿಲೇಯಲ್ಲಿ ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನವನ್ನು, 200 ಮೀಟರ್ ಓಟದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.
ವಂಶಿತ.ಎನ್ ( ವಸಂತ ಕುಮಾರ್ ಮತ್ತು ಸುಜಾತ ದಂಪತಿ ಪುತ್ರಿ) ಇವರು ಉದ್ದಜಿಗಿತದಲ್ಲಿ ಕಂಚಿನ ಪದಕ ಮತ್ತು 4×100ಮೀಟರ್ ರಿಲೇಯಲ್ಲಿ ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸಾನ್ವಿ ಆನಂದ್ (ಆನಂದ್ ಮತ್ತು ವಾಣಿಶ್ರೀ ದಂಪತಿ ಪುತ್ರಿ) ದಿಶಾ.ಬಿ (ಪುರುಷೋತ್ತಮ ಮತ್ತು ಸವಿತಾ ದಂಪತಿ ಪುತ್ರಿ) ಇವರು 4×100ಮೀಟರ್ ರಿಲೇಯಲ್ಲಿ ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕ್ಷಮಾ ಜೆ.ರೈ (ಜಗದೀಶ್ ರೈ ಮತ್ತು ಶೋಭಾ ದಂಪತಿ ಪುತ್ರಿ), ಶ್ರೀರಕ್ಷ.ಕೆ( ದೇವರಾಜ್ ಮತ್ತು ವಾಣಿಶ್ರೀ ದಂಪತಿ ಪುತ್ರಿ) , ಸಾನ್ವಿತಾ ನೆಕ್ಕರೆ (ಉಮೇಶ್ ನೆಕ್ಕರೆ ಮತ್ತು ಕವಿತಾ ದಂಪತಿ ಪುತ್ರಿ) ಇವರು 4×100ಮೀಟರ್ ರಿಲೇಯಲ್ಲಿ ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ನಿಶ್ಮ (ಪ್ರದೀಪ್ ಮತ್ತು ಪ್ರಶಾಂತಿ ದಂಪತಿ ಪುತ್ರಿ) ಹಾಗೂ ಶರ್ವಿನ್.ಸಿ ( ಚಿತ್ರನಾಯಗಂ ಮತ್ತ ಪ್ರವೀಣ ಕುಮಾರಿ ದಂಪತಿ ಪುತ್ರ) ಇವರು ದಕ್ಷಿಣ ಮಧ್ಯಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಈ ಎಲ್ಲಾ ಕ್ರೀಡಾಳುಗಳನ್ನು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ ಸಿವಿಲ್ ವಿಭಾಗದ ನಿವೃತ್ತ ಮುಖ್ಯಸ್ಥರಾದ ಪ್ರೊಫೆಸರ್ ಹಾಗೂ ಮಂಗಳೂರು ವಿಭಾಗ ಮಾನ್ಯ ಸಂಘಚಾಲಕ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾರಾಯಣ ಶೆಣೈ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯರಾದ ಸೇಡಿಯಾಪು ಜನಾರ್ಧನ್ ಭಟ್, ಶಾಲಾ ಸಂಚಾಲಕ ರವಿನಾರಾಯಣ ಎಂ ಆಡಳಿತ ಮಂಡಳಿಯ ಸದಸ್ಯರು ಕೃಷ್ಣ ಮೋಹನ್ ಡಾ.ಅಮೃತ ಪ್ರಸಾದ್ ಹಾಗೂ ಚಂದ್ರಶೇಖರ್ ಎಸ್ ಅಭಿನಂದಿಸಿದರು. ಶಾಲಾ ಗುರುಗಳಾದ ಸತೀಶ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಸಂಧ್ಯಾ ವಂದಿಸಿ, ಅನುರಾಧ ಮತ್ತು ಕವಿತಾ ಕೆ.ಜಿ ಕಾರ್ಯಕ್ರಮ ನಿರೂಪಿಸಿದರು.









