ಬಡಗನ್ನೂರು: ಜಾಗೃತ ಹಿಂದು ಜಾಗರಣ ಸುಳ್ಯಪದವು ಇದರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಸುಳ್ಯಪದವು ಇದರ ಸಂಪೂರ್ಣ ಸಹಕಾರದೊಂದಿಗೆ ಪ್ರಪ್ರಥಮ ಬಾರಿಗೆ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಅಟ್ಟಿ ಮಡಿಕೆ ಉತ್ಸವ–2024 ಕಾರ್ಯಕ್ರಮ ಆ.26ರಂದು ಸೋಮವಾರ ಅಪರಾಹ್ನ ಗಂಟೆ 2:45ರಿಂದ ಇಲ್ಲಿನ ಶಬರಿನಗರ ಶ್ರೀ ಸ್ವಾಮಿ ಕೊರಗಜ್ಜ ವಠಾರದಲ್ಲಿ ಉದ್ಘಾಟನೆಗೊಳ್ಳಲಿದೆ.
ಅಟ್ಟಿ ಮಡಿಕೆ ಉತ್ಸವದ ಉದ್ಘಾಟನೆಯನ್ನು ಸುಳ್ಯಪದವು ಶ್ರೀ ಮಂಜುನಾಥ ರೋಡ್ ಲೈನ್ಸ್ ನ ಮ್ಹಾಲಕರಾದ ರವಿಶಂಕರ್ ಬಜ ಉದ್ಘಾಟಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ, ಅಟ್ಟಿ ಮಡಕೆಯ ಜೊತೆಗೆ ಪುಟಾಣಿ ಕೃಷ್ಣವೇಷಧಾರಿಗಳ ಮೆರವಣಿಗೆ ಹಾಗೂ ಸುಳ್ಯಪದವಿನ ಹೃದಯ ಭಾಗವಾದ ಬಸ್ಸ್ಟ್ಯಾಂಡ್ ಬಳಿ ಮಕ್ಕಳ ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ದೇಲಂಪಾಡಿ ಹರಿಹರಸುತ ಬಳಗದವರಿಂದ ಸಿಂಗಾರಿ ಮೇಳ ಹಾಗೂ ಬಳಿಕ ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಮಸ್ತ ಹಿಂದು ಭಾಂದವರು ಆಗಮಿಸಿ ಎಲ್ಲಾ ರೀತಿಯಲ್ಲಿ ಸಹಕರಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸುಳ್ಯಪದವು ಜಾಗೃತ ಹಿಂದು ಜಾಗರಣ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.