ಪೆರಾಬೆ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಸಿ ಮೀನು ಮಾರಾಟದ ಹಕ್ಕಿನ ಬಹಿರಂಗ ಏಲಂ ಪ್ರಕ್ರಿಯೆ ಆ.31ರಂದು ಗ್ರಾ.ಪಂ.ಸಭಾಭವನದಲ್ಲಿ ನಡೆದಿದ್ದು 4,೦೦,1೦೦ ರೂಪಾಯಿಗೆ ಖಾಯಂ ಗೊಂಡಿದೆ.
ಬಹಿರಂಗ ಏಲಂ ಪ್ರಕ್ರಿಯೆಯ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆದ್ದೊಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 15-9-2024ರಿಂದ 14-9-2025ರ ತನಕದ 1 ವರ್ಷದ ಅವಧಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಸಿ ಮೀನು ಮಾರಾಟದ ಹಕ್ಕಿನ ಬಹಿರಂಗ ಏಲಂ ನಡೆಯಿತು. ಏಲಂ ಪ್ರಕ್ರಿಯೆಯಲ್ಲಿ 8 ಜನ ಬಿಡ್ಡುದಾರರು ಭಾಗವಹಿಸಿದ್ದು 4,೦೦,1೦೦ ರೂಪಾಯಿಗೆ ಉಪ್ಪಿನಂಗಡಿ ಕೆಂಪಿಮಜಲಿನ ಮಹಮ್ಮದ್ ಮುಸ್ತಾಹಿನ್ ಎಂಬವರಿಗೆ ಖಾಯಂ ಆಗಿದೆ. ಏಲಂ ಪ್ರಕ್ರಿಯೆ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಚಂದ್ರಶೇಖರ ರೈ, ಮೋಹನದಾಸ್ ರೈ, ಸಿ.ಎಂ. ಫಯಾಝ್ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾಲಿನಿ ಕೆ.ಬಿ. ಏಲಂ ಪ್ರಕ್ರಿಯೆ ನಡೆಸಿದರು. ಸಿಬ್ಬಂದಿಗಳು ಸಹಕರಿಸಿದರು.