ಬಡಗನ್ನೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಶ್ರೀ ಬಾಲಸುಬ್ರಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸುಳ್ಯಪದವು ಇವರ ಸಹಯೋಗದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟವು ಸೆ.9ರಂದು ಸರ್ವೋದಯ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯಾಟವನ್ನು ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ದೀಪ ಪ್ರಜ್ವಲನ ಮಾಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕ ಮಹದೇವ ಭಟ್ ಕೊಲ್ಯ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀ ಪ್ರಕಾಶ್ಚಂದ್ರ ಮರದಮೂಲೆ, ಸಂಸ್ಥೆಯ ಮುಖ್ಯೋಪಾಧ್ಯಾರಾದ ಶ ಸುಖೇಶ್ ರೈ ಎನ್ ಸಂಸ್ಥೆಯ ಕೋಶಾಧಿಕಾರಿ ಅರುಣಕುಮಾರ್ ಕನ್ನಡ್ಕ ,ದೈಹಿಕ ಶಿಕ್ಷಣ ಶಿಕ್ಷಕರ ಗ್ರೇಡ್ ಒನ್ ಅಧ್ಯಕ್ಷರಾದ ಕರುಣಾಕರ ಮಣಿಯಾಣಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಸಜೀಲ. ದೈಹಿಕ ಶಿಕ್ಷಣ ಶಿಕ್ಷಕ ಇ.ಗೋಪಾಲಕೃಷ್ಣ ಭಟ್ ಕೊಲ್ಯ, ರತ್ನ ಕೇಶವ ಗೌಡ ಶಬರಿ ನಗರ ಸುಳ್ಯಪದವು, ಉದ್ಯಮಿ ಜನಾರ್ಧನ ಪೂಜಾರಿ ಪದಡ್ಕ, ಆನಂದ ಪಾದೆಗದ್ದೆ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ:-
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ, ಗಂಗಾಧರ ರೈ ಎಂ.ಜಿ, ಸುರೇಶ್ ಸತ್ಯಸಾಯಿ ನಿಲಯ, ಗಡಿನಾಡ ಕನ್ನಡ ಸಾಂಸ್ಕೃತಿಕ ಸಂಘ ಅಧ್ಯಕ್ಷ ಚನೀಯಪ್ಪ ನಾಯ್ಕ ನಿಡಿಯಡ್ಕ, ದೈಹಿಕ ಶಿಕ್ಷಣ ಶಿಕ್ಷಕರಾದ ಸುಧಾಕರ್ ರೈ, ಸುಧೀರ್ ರೈ, ಸೀತಾರಾಮ ಗೌಡ ಉಪಸ್ಥಿತರಿದ್ದರು.
ಬಹುಮಾನ ವಿತರಣೆ:-
ಹುಡುಗಿಯರ ವಿಭಾಗದಲ್ಲಿ ತ್ರೋಬಾಲ್ ಪಂದ್ಯಾಟದಲ್ಲಿ ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ, ಮೌಂಟನ್ ವ್ಯೂ ಸಾಲ್ಮರ ಪ್ರೌಢಶಾಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಹುಡುಗರ ವಿಭಾಗದಲ್ಲಿ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಪ್ರಥಮ ಸ್ಥಾನ, ಹಾಗೂ ಸೈಂಟ್ ಆಂಡ್ ಮ್ಯಾರೀಸ್ ಇಂಗ್ಲಿಷ್ ಮೀಡಿಯಂ ವಿದ್ಯಾಲಯ ಉಪ್ಪಿನಂಗಡಿ, ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
14ರ ವಯೋಮಾನದ ಎಂಟನೇ ತರಗತಿಯ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಹುಡುಗರ ವಿಭಾಗದಲ್ಲಿ ರಾಜೇಶ್ವರ ಜಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ, ಆಯುಷ್ಯ ತುಲ್ ಸಲೀಂ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ, ಪ್ರತೀಕ್ ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು, ಹಾಗೆಯೇ ಹುಡುಗಿಯರ ವಿಭಾಗದಲ್ಲಿ ಆಯಿಷತ್ ಹಿಬಾ ಹಾಗೂ ನಿರೀಕ್ಷಾ ಶೆಟ್ಟಿ, ಬೆಥನಿ ಆಂಗ್ಲ ಮಾಧ್ಯಮ ಶಾಲೆ, ಫಾತಿಮಾತ್ ಶಫಿಲ ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ, ಸಾಲ್ಮರ ಇವರುಗಳನ್ನು ಆಯ್ಕೆ ಮಾಡಲಾಯಿತು. ಸುಳ್ಯಪದವು ಸರ್ವೋದಯ ಶಾಲಾ ಸಹ ಶಿಕ್ಷಕಿ ಪ್ರಶಾಂತಿ ರೈ ಕಾರ್ಯಕ್ರಮ ನಿರೂಪಿಸಿದರು.