ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಪದಾಧಿಕಾರಿಗಳ ಭೇಟಿ – ಪರಿಶೀಲನೆ

0

ಆಲಂಕಾರು: ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗರ್ಭಗುಡಿ, ನಮಸ್ಕಾರ ಮಂಟಪ,ಸುತ್ತು ಪೌಳಿ ನವೀಕರಣದ ಅಂದಾಜು‌ ಮೊತ್ತದ ಆಡಳಿತಾತ್ಮಕ ಮಂಜೂರಾತಿ ನೀಡುವ ಕುರಿತು ಜಿಲ್ಲಾಧಿಕಾರಿಗಳ ಪತ್ರದಂತೆ ಪರಿಶೀಲನೆ ಗಾಗಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಛೇರಿ ಬೆಂಗಳೂರಿನ ವೀರಶೈವಾಗಮ ಅಗಮ ಪಂಡಿತರಾದ ಡಾ!.ವೈ.ಆರ್.ನಾಗಭೂಷಣಾರಾಧ್ಯ,ಕಾರ್ಯಪಾಲಕ ಅಭಿಯಂತರಾದ ಎನ್.ಬಿ ಹರಿಶಂಕರ್,ಭೂಮಾಪಕರಾದ ಹರ್ಷವರ್ಧನ್ ಟಿ ಯವರು ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನ ಕ್ಕೆ ಭೇಟಿ ನೀಡಿ ದೇವಸ್ಥಾನದ ಗರ್ಭಗುಡಿ,ನಮಸ್ಕಾರ ಮಂಟಪದ ಕೆಲಸ ಕಾರ್ಯಗಳನ್ನು ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದರು ನಂತರ ದೇವಸ್ಥಾನ ನವೀಕರಣದ ಅಂದಾಜು ಪಟ್ಟಿಯ ನ್ನು ವೀಕ್ಷಣೆ ಮಾಡಿ, ದೇವಸ್ಥಾನದ ದಾಖಲೆಗಳನ್ನು ಪರಿಶೀಲನೆ ನಡೆಸಿ,ದೇವಸ್ಥಾನದ ಇತಿಹಾಸದ ಬಗ್ಗೆ ಮಾಹಿತಿ ಪಡೆದು ವ್ಯವಸ್ಥಾಪನಾ ಸಮಿತಿ ಮತ್ತು ಊರವರ ಭಕ್ತರೊಂದಿಗೆ ಮಾತುಕತೆ ನಡೆಸಿದರು. ನಂತರ ದೇವಸ್ಥಾನದ ಸಿಬ್ಬಂದಿಗಳ ಹಾಜರಾತಿ ಪುಸ್ತಕ ಪರಿಶೀಲನೆ ನಡೆಸಿದರು.


ಹಾಜರಾತಿ ಪುಸ್ತಕದಲ್ಲಿ ಕೆಲವು ಸಿಬ್ಬಂದಿಗಳು ಹಾಜರಾತಿ ಹಾಕದೆ ಕೆಲಸ ನಿರ್ವಹಿಸಿದ್ದು ಯಾರು ಹಾಜರಾತಿ ಹಾಕದ ಸಿಬ್ಬಂದಿಗಳ ಹಾಜರಾತಿ ಯನ್ನು ಹಾಜರಾತಿ ಪುಸ್ತಕದಲ್ಲಿ ರಜೆ ಎಂದು
ಅಬ್ಸೆಂಟ್ ಹಾಕಿದರು. ನಂತರ ಸಹಾಯಕ ಅರ್ಚಕರು ಹಾಗೂ ಸಿಬ್ಬಂದಿಗಳು ದಿನಾಲೂ ಹಾಜರಾತಿ ಹಾಕುವಂತೆ ಸೂಚನೆ ನೀಡಿದರು. ದೇವಸ್ಥಾನದ ರೂಡಿ ಮತ್ತು ಸಂಪ್ರದಾಯದಂತೆ ಕಾನೂನು ಬದ್ದವಾಗಿ ದೇವಸ್ಥಾನ ನಡೆಯಬೇಕೆಂದು ತಿಳಿಸಿ, ಶ್ರೀ ದೇವಿಗೆ ಶೈವಾಗಮ ಪದ್ದತಿಯಲ್ಲಿ ಪೂಜಾ ವಿಧಿವಿಧಾನ ನಡೆಯಬೇಕೆಂದು ಸಲಹೆ ನೀಡಿ, ಅದಕ್ಕೆ ಬೇಕಾದ ಅರ್ಹತೆಗಳನ್ನು ಅರ್ಚಕರು ಹೊಂದಬೇಕೆಂದು ತಿಳಿಸಿದರು.


ನಂತರ ಭೂಮಾಪಕರಾದ ಹರ್ಷವರ್ಧನ್ ನವರು ಮಾತನಾಡಿ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಪಟ್ಟ ಎಲ್ಲಾ ಜಾಗವನ್ನು ಸರ್ವೆ ಮಾಡಿ ಗಡಿ ಗುರುತು ಮಾಡುವುದಾಗಿ ತಿಳಿಸಿದರು. ನಂತರ ಇಲಾಖಾಧಿಕಾರಿಗಳು ದೇವಸ್ಥಾನದಲ್ಲಿ ಕುಳಿತು ವರದಿ ತಯಾರಿಸಿ ಜೀರ್ಣೋದ್ಧಾರ ಕೆಲಸ ಕಾರ್ಯಗಳಿಗೆ ಆಡಳಿತಾತ್ಮಕ ಮಂಜೂರಾತಿಗೆ ಸರಕಾರಕ್ಕೆ ವರದಿ ಮಾಡುವುದಾಗಿ ತಿಳಿಸಿದರು. ನಂತರ ದೇವಸ್ಥಾನಕ್ಕೆ ಸಂಬಂಧಪಟ್ಟ ಕೆಲವು ಜಾಗಗಳನ್ನು ವೀಕ್ಷಣೆ ಮಾಡಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಈ ಸಂಧರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ,ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರಿಪ್ರಸಾದ್ ಉಪಾದ್ಯಾಯ ಕುಪ್ಲಾಜೆ, ರಾಧಾಕೃಷ್ಣ ರೈ ಪರಾರಿಗುತ್ತು, ವಿಠಲ ರೈ ಪೆರಾಬೆ ಪಟ್ಟೆ,ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಜೀರ್ಣೋದ್ಧಾರ ಸಮಿತಿಯ ಸದಸ್ಯರು,ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳು ಮತ್ತು ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here