ಪೆರ್ನೆ: ಕಡೇಶಿವಾಲಯ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿಟ್ಲ, ಜನ ಜಾಗೃತಿ ವೇದಿಕೆ ಪೆರ್ನೆ ವಲಯ ಹಾಗೂ ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇವುಗಳ ಸಹಭಾಗಿತ್ವದಲ್ಲಿ ಕಡೇ ಶಿವಾಲಯ ಸರ್ಕಾರಿ ಪ್ರೌಢಶಾಲೆಯಲ್ಲಿ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರ್ಲಾಪು ಬಿ ಒಕ್ಕೂಟದ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಎಸ್ ರಾವ್ ರವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಹಿರಿಯ ಸಹಶಿಕ್ಷಕರಾದ ಗೀತಾ ಕುಮಾರಿಯವರು ನೆರವೇರಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಿವೃತ್ತ ಶಿಕ್ಷಕರು ಹಾಗೂ ಪತ್ರಕರ್ತರಾದ ಜಯಾನಂದ ಪೆರಾಜೆಯವರು ಮಾತನಾಡಿ, “ಹದಿಹರೆಯವೆಂದರೆ ಹಾದಿ ತಪ್ಪುವ ಸಮಯ, ಅನೇಕ ಸಂಗತಿಗಳು ಸವಲತ್ತುಗಳು ಪ್ರಪಂಚದಲ್ಲಿವೆ ಆದರೆ ಅವುಗಳು ನಮಗೆ ಅಗತ್ಯವೋ? ಇಲ್ಲವೋ? ಎಂಬುದನ್ನು ಯೋಚಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಯಾವುದು ಒಳ್ಳೆಯದು? ಯಾವುದು ಕೆಟ್ಟದು? ಯಾವುದನ್ನು ಸ್ವೀಕರಿಸಬೇಕು? ಎಂಬ ಪ್ರಜ್ಞೆ ಇರಬೇಕು. ಬೆಳೆಯುವ ವಯಸ್ಸಿನಲ್ಲಿ ಆರೋಗ್ಯ ಬೇಕು ದುಶ್ಚಟಗಳು ಬೇಡ, ದುಶ್ಚಟಗಳು ಸಾಮಾನ್ಯವಾಗಿ ಸಹವಾಸ ದೋಷದಿಂದ ಅಂಟಿಕೊಳ್ಳುತ್ತವೆ. ಅಭ್ಯಾಸ ಬಲ ಚಟವಾಗಿ ಬೆಳೆದು ಕೊನೆಗೆ ಚಟ್ಟವಾಗಿ ಪರಿಣಮಿಸುತ್ತದೆ. ಮನುಷ್ಯನಿಗೆ ಮಾನಸಿಕ ಆರೋಗ್ಯ ಮುಖ್ಯ ಎಂದು ಮಾಹಿತಿ ಮಾರ್ಗದರ್ಶನವನ್ನು ನೀಡಿದರು. ವಲಯದ ಜನಜಾಗೃತಿ ವೇದಿಕೆ ಸದಸ್ಯರಾದ ನವೀನ್ ಕುಮಾರ್ ಪದಬರಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಜನಜಾಗೃತಿ ವೇದಿಕೆಯ ಸದಸ್ಯರಾದ ಉಮಾನಾಥ ಶೆಟ್ಟಿ, ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ರೋಟರಿ ಕ್ಲಬ್ ಬಂಟ್ವಾಳ ಟೌನ್ ಕಾರ್ಯದರ್ಶಿ ರೊಟೇರಿಯನ್ ನಾರಾಯಣ ಪೆರ್ನೆ ಹಾಗೂ ಸದಸ್ಯರಾದ ರೊಟೇರಿಯನ್ ಭಾಸ್ಕರ್ ಕೊಳ್ನಾಡ್, ಸಹಶಿಕ್ಷಕರಾದ ಸತೀಶ್ ರವರು ಶುಭ ಹಾರೈಸಿದರು. ಕೆಮ್ಮನ್ಪಲ್ಕೆ ವಿಭಾಗದ ಸೇವಾಪ್ರತಿನಿಧಿ ಸುಚಿತ್ರಾ ಆಳ್ವಾ ಸ್ವಾಗತಿಸಿ, ವಲಯ ಮೇಲ್ವಿಚಾರಕರಾದ ಶಾರದಾ ಎ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here