ರೋಟರಿ ಈಸ್ಟ್/ಯುವದಿಂದ ಬಲ್ನಾಡು ಉಜ್ರುಪಾದೆ ಸ.ಹಿ.ಪ್ರಾ. ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ರೋಗ ಬರುವ ಮೊದಲೇ ಆರೋಗ್ಯ ಕಾಪಾಡಿ-ಚನಿಲ ತಿಮ್ಮಪ್ಪ ಶೆಟ್ಟಿ
ಪುತ್ತೂರು; ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರಿ ಕ್ಲಬ್ ಪುತ್ತೂರು ಯುವ, ಬಲ್ನಾಡು ಉಜ್ರುಪಾದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಮತ್ತು ವಿದ್ಯಾಭಿಮಾನಿಗಳ ಸಂಘ ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ಎ.ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಅ.12ರಂದು ಬಲ್ನಾಡು ಉಜ್ರುಪಾದೆ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

ರೋಗ ಬರುವ ಮೊದಲೇ ಆರೋಗ್ಯ ಕಾಪಾಡಿ-ಚನಿಲ ತಿಮ್ಮಪ್ಪ ಶೆಟ್ಟಿ:
ಬಲ್ನಾಡು ಉಜ್ರುಪಾದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಮತ್ತು ವಿದ್ಯಾಭಿಮಾನಿಗಳ ಸಂಘದ ಗೌರವಾಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿಯವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಸಮಾಜದಲ್ಲಿ ನಾವು ಕಾರ್ಯಗಳನ್ನು ಮಾಡಬೇಕಾದರೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇಂದಿನ ದೈನಂದಿನ ಒತ್ತಡದ ಜೀವನದಲ್ಲಿ ಆರೋಗ್ಯದಲ್ಲಿ ನಿಗಾ ವಹಿಸಿಕೊಳ್ಳುವುದು ಮುಖ್ಯ. ಉತ್ತಮ ಆಹಾರ ಸೇವನೆ, ವ್ಯಾಯಾಮ ಮಾಡುವುದು, ಆನಂದದಾಯಕ ನಿದ್ರೆ ಮಾಡಿದ್ದಲ್ಲಿ ಉತ್ತಮ ಆರೋಗ್ಯ ನಮ್ಮದಾಗುವುದು. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸರಕಾರ ಕೂಡ ಆಯುಷ್ಮಾನ್ ಯೋಜನೆಯಂತಹ ಅನೇಕ ಯೋಜನೆಗಳು ಹಮ್ಮಿಕೊಂಡಿದೆ ಎಂದರು.

ರೋಟರಿ ಈಸ್ಟ್ ನಿಂದ 4ನೇ ವೈದ್ಯಕೀಯ ಶಿಬಿರ-ಶಶಿಧರ್ ಕಿನ್ನಿಮಜಲು:
ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಮಾತನಾಡಿ, ಸಾಮಾಜಿಕ ಬದ್ಧತೆಯೊಂದಿಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಾಜಕ್ಕೆ ಪರಿಚಯಿಸಿರುವ ಸಂಸ್ಥೆ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯಾಗಿದೆ. ರೋಟರಿ ಈಸ್ಟ್ ಇದೀಗ ನಾಲ್ಕನೇ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಂಡಿದ್ದು ಈ ಭಾಗದಲ್ಲಿ ಹಮ್ಮಿಕೊಂಡ ಈ ವೈದ್ಯಕೀಯ ಶಿಬಿರದಲ್ಲಿ ಫಲಾನುಭವಿಗಳು ಹೆಚ್ಚೆಚ್ಚು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಿ ಎಂದರು.

 ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮ್ ರಾಜ್,  ,ಎ.ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನ ಡಾ.ಪ್ರತೀಕ, ಬಲ್ನಾಡು ಉಜ್ರುಪಾದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಮತ್ತು ವಿದ್ಯಾಭಿಮಾನಿಗಳ ಸಂಘದ ಅಧ್ಯಕ್ಷ ನಾರಾಯಣ ಪಾಟಾಳಿ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಧಾಕೃಷ್ಣ ನಾಗಗದ್ದೆ, ಮಂಗಳೂರಿನ ಕಾಮತ್ ಆಪ್ಟಿಕಲ್ಸ್ ನ ಡಾ.ಲೋಕೇಶ್, ರೋಟರಿ ಈಸ್ಟ್ ಕೋಶಾಧಿಕಾರಿ ಜಯಂತ್ ಬಾಯಾರು, ರೋಟರಿ ಯುವ ಪೂರ್ವಾಧ್ಯಕ್ಷ ನರಸಿಂಹ ಪೈ ಸಹಿತ ಹಲವರು ಉಪಸ್ಥಿತರಿದ್ದರು. 

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು‌. ಹಿರಿಯ ವಿದ್ಯಾರ್ಥಿಗಳಾದ ನಾರಾಯಣ ಗೌಡ ಕುಕ್ಕುತ್ತಡಿ, ಶ್ರೀಮತಿ ಪೂರ್ಣಿಮಾ ಕೋಡಿಯಡ್ಕ, ಉದಯಕುಮಾರ್ ಕೋಡಿಬೈಲುರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಶಾಲೆಯ ಮುಖ್ಯಗುರು ಶ್ರೀಮತಿ ಭವಾನಿರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಉಷಾ ವಂದಿಸಿದರು.

ಲಭ್ಯವಿದ್ದ ತಜ್ಞರು…
*ಸಾಮಾನ್ಯ ವೈದ್ಯರು, *ಇಸಿಜಿ ತಂತ್ರಜ್ಞರು, *ಕಣ್ಣಿನ ತಜ್ಞರು, *ಚರ್ಮರೋಗ ತಜ್ಞರು, *ಮಕ್ಕಳ ತಜ್ಞರು, *ಸ್ತ್ರೀರೋಗ ತಜ್ಞರು, *ರಕ್ತದೊತ್ತಡ ಮತ್ತು ಸಕ್ಕರೆ ತಪಾಸಣೆ

ಸೇವೆಗಳು..
ಕಣ್ಣು, ಕಿವಿ, ಮೂಗು, ಗಂಟಲು, ಹಲ್ಲು ತಪಾಸಣೆ ಹಾಗೂ ಇತರ ಆರೋಗ್ಯ ಸಲಹೆಗಳು ಶಿಬಿರದಲ್ಲಿ ಲಭ್ಯವಿತ್ತು.

LEAVE A REPLY

Please enter your comment!
Please enter your name here