ಬೆಟ್ಟಂಪಾಡಿ ಶ್ರೀ ಕ್ಷೇತ್ರದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ

0

ಬೆಟ್ಟಂಪಾಡಿ: ಶ್ರೀ ‌ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಬೆಟ್ಟಂಪಾಡಿ ಇದರ ಆಶ್ರಯದಲ್ಲಿ ಶ್ರೀ ಸರಸ್ವತಿ ಚಾರಿಟಬಲ್ ಟ್ರಸ್ಟ್ (ರಿ) ಪುತ್ತೂರು ಇವರ ಸಹಭಾಗಿತ್ವದಲ್ಲಿ ಜಸ್ಟೀಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ತಜ್ಞ ವೈದ್ಯರುಗಳಿಂದ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ ಶ್ರೀ ಕ್ಷೇತ್ರ ಬೆಟ್ಟಂಪಾಡಿಯ‌ “ಬಿಲ್ವಶ್ರೀ” ಸಭಾಂಗಣದಲ್ಲಿ ನಡೆಯಿತು. ಶಿಬಿರದ ಉದ್ಘಾಟನೆಯನ್ನು‌ ಶ್ರೀ ಸರಸ್ವತಿ‌ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ ನಿರ್ದೇಶಕ ರಮೇಶ್ಚಂದ್ರ ನೆರವೇರಿಸಿದರು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಶ್ರೀ‌ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕರವರು ವಹಿಸಿದ್ದರು. ವೇದಿಕೆಯಲ್ಲಿ ಜಸ್ಟೀಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ‌ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾದ ಜೋನ್ ಪಾಯಸ್, ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಅನುವಂಶಿಕ ಆಡಳಿತ ಮೊಕ್ತೇಸರರ ವಿನೋದ್ ಕುಮಾರ್ ಬಲ್ಲಾಳ್ ಶಿವಗಿರಿ‌ ಬೀಡು, ಮೊಕ್ತೇಸರ ವಿನೋದ್ ರೈ ಗುತ್ತು, ಅಭಿವೃದ್ಧಿ ಸಮಿತಿಯ ‌ಕಾರ್ಯದರ್ಶಿ ವಸಂತ ಕೃಷ್ಣ ಕೋನಡ್ಕ ಉಪಸ್ಥಿತರಿದ್ದರು. ಸುಮನ ಬಲ್ಲಾಳ್ ಹಾಗೂ ಸುಲೋಚನ ಕೊಮ್ಮಂಡ ಪ್ರಾರ್ಥಿಸಿದರು. ವಸಂತಕೃಷ್ಣ ಕೋನಡ್ಕ ಸ್ವಾಗತಿಸಿ, ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಬೆಟ್ಟಂಪಾಡಿ ಪರಿಸರದ ಆಶಾ ಕಾರ್ಯಕರ್ತೆಯರು ಮತ್ತು ಶ್ರೀ ‌ಕ್ಷೇತ್ರದ ವಿವಿಧ ‌ಸಂಘ ಸಂಸ್ಥೆಗಳ ಸದಸ್ಯರು ಸ್ವಯಂಸೇವಕಾರಿ ಸಹಕರಿಸಿದರು.

ಶಿಬಿರದ ಪ್ರಯೋಜ‌ನ ಪಡೆದ 142 ಮಂದಿ
ವೈದ್ಯಕೀಯ ವಿಭಾಗ, ಕಿವಿ ಮೂಗು ಗಂಟಲು ವಿಭಾಗ, ಕಣ್ಣು ವಿಭಾಗ, ಮೂಳೆ ಮತ್ತು ಕೀಲು ವಿಭಾಗದ ತಜ್ಞ ವೈದ್ಯರು ಭಾಗವಹಿಸಿದರು. ರಕ್ತದೊತ್ತಡ, ಮಧುಮೇಹ, ಇಸಿಜಿ ಪರೀಕ್ಷೆಗಳನ್ನು ‌ಅಗತ್ಯವಿದ್ದವರಿಗೆ ಮಾಡಲಾಯಿತು. ‌ಹಾಗೂ ಕೆಲವೊಂದು ಔಷಧಿಗಳನ್ನು ‌ಉಚಿತವಾಗಿ ನೀಡಲಾಯಿತು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದವರಿಗೆ ಕ್ಯಾಂಪ್ ಕಾಡ್೯ ನೀಡಿ ಆಸ್ಪತ್ರೆಯಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ವೈದ್ಯರು ತಿಳಿಸಿದರು. 142 ಮಂದಿ ಈ ಶಿಬಿರದ ಪ್ರಯೋಜನ ಪಡೆದರು.

LEAVE A REPLY

Please enter your comment!
Please enter your name here