ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0


ರೂ.413.41 ಕೋಟಿ ವ್ಯವಹಾರ, ರೂ.2.45 ಕೋಟಿ ಲಾಭ, ಶೇ.18 ಡಿವಿಡೆಂಡ್

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 413.41ಕೋಟಿ ವಾರ್ಷಿಕ ವ್ಯವಹಾರ ನಡೆಸಿ ರೂ.2,45,08,398.64 ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.18 ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ನವೀನ್ ಡಿ. ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.


ಮಹಾಸಭೆಯು ಸೆ.15ರಂದು ಕೇಂದ್ರ ಕಚೇರಿಯ ರೈತ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 111ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಸಂಘವು ವರದಿ ವರ್ಷಾಂತ್ಯಕ್ಕೆ ಸಂಘದಲ್ಲಿ 4,714 ಸದಸ್ಯರಿಂದ ರೂ.6,03,66,200 ಪಾಲು ಬಂಡವಾಳ, 692 ಡಿ ತರಗತಿ ಸದಸ್ಯರಿಂದ ರೂ.2,86,800 ಪಾಲು ಬಂಡವಾಳವಿದೆ. ರೂ.45,45,56,331 ಠೇವಣಾತಿಯಿದೆ. ವರದಿ ವರ್ಷದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ರೂ.44,07,41,000 ಸಾಲ ಪಡೆದಕೊಂಡು ಒಟ್ಟು ರೂ.43,57,15,990ನ್ನು ಪಾವತಿಸಲಾಗಿದೆ. ಸದಸ್ಯರಿಗೆ ನೀಡಿದ ಸಾಲ ಗಳಲ್ಲಿ ಶೇ.96.60 ವಸೂಲಾತಿಯಾಗಿದೆ. ಲಾಭ ಗಳಿಕೆಯಲ್ಲಿ ಈ ವರ್ಷ ಐತಿಹಾಸಿಕ ಸಾಧನೆ ಮಾಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಗರೀಷ್ಠ ರೂ.74,35,504.61 ಹೆಚ್ಚುವರಿ ಲಾಭಗಳಿಸಿದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿಯನ್ನು ಪಡೆದುಕೊಂಡಿದೆ. ಲಾಭಾಂಶವನ್ನು ಸಂಘದ ಉಪನಿಬಂದನೆಯAತೆ ವಿಂಗಡಿಸಲಾಗಿದೆ ಎಂದರು.

ಅನುಷ್ಠಾಗೊಳಿಸಿದ ಯೋಜನೆಗಳು:
ಸಂಘದ ಮುಖಾಂತರ ಪ್ರಸಕ್ತ ವರ್ಷದಲ್ಲಿ ಮಹಾಸಭೆಗೆ ಹಾಜರಾಗುವ ಸದಸ್ಯರಿಗೆ ರೂ.1೦೦ ಹಾಜರಾತಿ ಭತ್ಯೆ, ಕೇಂದ್ರ ಕಚೇರಿ ಹಾಗೂ ಶಾಖೆಗಳಲ್ಲಿ ಕೃಷಿ ಸಲಕರಣಗೆಳ ಮಾರಾಟ ಕೇಂದ್ರ ಆರಂಭ, 6 ತಿಂಗಳ ಅವಧಿಗೆ ರಸಗೊಬ್ಬರ ಸಾಲ ನೀಡಲಾಗುತ್ತಿದ್ದು ಅದರಲ್ಲಿ 1 ತಿಂಗಳಿಗೆ ಬಡ್ಡಿ ರಹಿತ ಸಾಲ, ಕನಿಷ್ಠ ಬಾಡಿಗೆ ದರದಲ್ಲಿ ಕೃಷಿ ಸಲಕರಣೆಗಳು, ಕೈಂದಾಡಿ ಶಾಖೆಯಲ್ಲಿ ಬ್ಯಾಂಕಿಂಗ್ ವ್ಯವಹಾರ ಆರಂಭ, ಆವರ್ತನಾ(ಆರ್‌ಡಿ) ಪ್ರಾರಂಭ, ಉಚಿತ ಶವ ಸಂಸ್ಕಾರ ಪೆಟ್ಟಿಗೆ, ಮೃತ ಸಾಲಗಾರ ಸದಸ್ಯರ ವಾರೀಸುವದಾರರಿಗೆ ರೂ. 5000 ಸಾಂತ್ವನ ಧನ, ಮುಖ್ಯ ಕಚೇರಿ ಎಲ್ಲಾ ವಿಭಾಗ ಹಾಗೂ ಎರಡೂ ಶಾಖೆಗಳಿಗೆ ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಸಂಘದ ಲಾಂಛನವನ್ನು ರಚಿಸಲಾಗಿದೆ ಎಂದರು.

ಮುಂದಿನ ಯೋಜನೆಗಳು:
ಸಹಕಾರ ಸಂಘದಲ್ಲಿ ಸದಸ್ಯರು ಕ್ಯೂ. ಆರ್ ಕೋಡ್ ಮುಖಾಂತರ ಸಹಕಾರ ಸಂಘದಲ್ಲಿ ವ್ಯವಹರಿಸಬಹುದು. ಕೈಂದಾಡಿ ಹಾಗೂ ಆನಾಜೆ ಶಾಖೆಗಳಲ್ಲಿ ಸದಸ್ಯರಿಗೆ ಸಾಲ ಮರುಪಾವತಿಗೆ ಅವಕಾಶ, ಪೂರ್ಣಪ್ರಮಾಣದ ರಸಗೊಬ್ಬರ ದಾಸ್ತಾನು ಇದ್ದು ಮಿತದರದಲ್ಲಿ ಲಭ್ಯವಿದೆ. ಕೃಷಿ ಸಲಕರಣೆಗಳು ಮಿತದರದಲ್ಲಿ ಲಭ್ಯವಿದೆ. ಕೃಷಿಯೇತರ ದೀರ್ಘಾವಧಿ ಸಾಲದ ಮೊತ್ತವನ್ನು ರೂ.15 ಲಕ್ಷದಿಂದ ರೂ.20ಲಕ್ಷಕ್ಕೆ ಏರಿಗೆ ಮಾಡುವುದು ಹಾಗೂ ಸೂಪರ್ ಮಾರ್ಕೆಟ್ ಆರಭಿಸುವುದು, ಸಂಘದ ಹೊಸ ನಿವೇಶನದಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸುವ ಯೋಜನೆಯಿದೆ.


ಸದಸ್ಯರ ಪ್ರಮುಖ ಬೇಡಿಕೆಗಳು:
ಯಶಸ್ವಿನಿ ಯೋಜನೆಯ ಪುತ್ತೂರಿನ ಆಸ್ಪತ್ರೆಗೆ ಅನ್ವಯವಾಗುವಂತೆ ಸರಕಾರಕ್ಕೆ ಒತ್ತಾಯಿಸಿ ಸಹಕಾರ ಮತ್ತು ಆರೋಗ್ಯ ಸಚಿವರಿಗೆ ಮನವಿ ಮಾಡಬೇಕು. 2018ರಲ್ಲಿ ಸರಕಾರದಿಂದ ಮಂಜೂರಾದ ಸಾಲ ಮನ್ನಾ ಯೋಜನೆಯಿಂದ ವಂಚಿತರಾಗಿರುವ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪಕ್ಷ ಬೇದ ಮರೆತು ರೂಪು ರೇಶೆ ಮಾಡಬೇಕು. ಆಡಳಿತ ಮಂಡಳಿಯವರು ಶಾಸಕರಿಗೆ ಮನವಿ ಮಾಡಬೇಕು. ಸರಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ ರೂ.3 ಲಕ್ಷದಿಂದ ರೂ.5ಲಕ್ಷಕ್ಕೆ ಏರಿಕೆ ಮಾಡಿದ ಶೂನ್ಯ ಬಡ್ಡಿದರದ ಬೆಳೆಸಾಲ ಹಾಗೂ ರೂ.10 ಲಕ್ಷದಿಂದ ರೂ.15 ಲಕ್ಷಕ್ಕೆ ಏರಿಕೆ ಶೇ.3 ಬಡ್ಡಿದರದ ಸಾಲವನ್ನು ರೈತರಿಗೆ ಕೂಡಲೇ ನೀಡಬೇಕು. ಸಂಘವು ವರದಿ ವರ್ಷದಲ್ಲಿ ಅಧಿಕ ಲಾಭ ಗಳಿಸಿದ್ದು ಸಾಲಮನ್ನಾ ವಂಚಿತ ಸದಸ್ಯರಿಗೆ ಸ್ವಲ್ಪ ಭಾಗ ನೀಡಬೇಕು. ಸಂಘವು ಈ ಸಾಲಿನಲ್ಲಿ ಗರೀಷ್ಠ ಲಾಭ ಗಳಿಸಿದ್ದು ಡಿವಿಡೆಂಡ್ ಏರಿಕೆ ಮಾಡಬೇಕು. ಭತ್ತ ಬೆಳೆಯುವ ರೈತರಿದ್ದು ಅವರಿಗೂ ಸಹಕಾರ ಸಂಘದ ಮೂಲಕ ಪ್ರೋತ್ಸಾಹ ನೀಡಬೇಕು. ಅವರನ್ನು ಗೌರವಿಸಬೇಕು. ಸ್ವಂತ ನಿಧಿಯಿಂದ ನೀಡುವ ದೀಘಾವಧಿ ಸಾಲದ ಮೊತ್ತವನ್ನು ರೂ.25ಲಕ್ಷಕ್ಕೆ ಏರಿಸಬೇಕು. ರೈತರಿಗೆ ಎಲ್ಲಾ ರೀತಿಯಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ರೈತ ಸೇವಾ ಕೇಂದ್ರ ತೆರೆಯಬೇಕು ಎಂದು ಸದಸ್ಯರು ಆಗ್ರಹಿಸಿದರು. ಸದಸ್ಯರಾದ ಸುರೇಶ್ ಪ್ರಭು ಶೆಟ್ಟಿಮಜಲು, ಸುಬ್ರಾಯ ಶೆಟ್ಟಿಮಜಲು, ಪ್ರವೀಣ್ ನಾಕ್ ಸೇರಾಜೆ, ಹೊನ್ನಪ್ಪ ಪೂಜಾರಿ ಕೈಂದಾಡಿ, ಸೀತಾರಾಮ ಓಲಾಡಿ, ನಾರಾಯಣ, ರುಕ್ಮಯ್ಯ ಗೌಡ ಕಕ್ವೆ, ದೇವರಾಜ್, ರತ್ನಾಕರ ಪಿ.ಎಸ್, ವೃಷಭರಾಜ ಜೈನ್ ಮೊದಲಾದವರು ವಿವಿಧ ಸಲಹೆ, ಅಭಿಪ್ರಾಯಗಳನ್ನು ತಿಳಿಸಿದರು.


ಡಿವಿಡೆಂಡ್ ಶೇ.18ಕ್ಕೆ ಏರಿಕೆ, ಕೃಷಿಯೇತರ ದೀರ್ಘಾವಧಿ ಸಾಲ ರೂ.25 ಲಕ್ಷಕ್ಕೆ ಏರಿಕೆಗೆ ಸಮ್ಮತಿ:
ಆಡಳಿತ ಮಂಡಳಿಯು ಶೇ.16 ಡಿವಿಡೆಂಡ್ ನೀಡುವುದಾಗಿ ವರದಿಯಲ್ಲಿ ತಿಳಿಸಲಾಗಿತ್ತು. ಆದರೆ ಸಂಘವು ವರದಿ ಸಾಲಿನಲ್ಲಿ ಐತಿಹಾಸಿಕ ಲಾಭಗಳಿಸಿದೆ. ಅಲ್ಲದೆ ಅಧಿಕ ಮಳೆಯಿಂದ ಅಡಿಕೆ ಹಾನಿಯುಂಟಾಗಿದ್ದು ಡಿವಿಡೆಂಡ್ ಏರಿಕೆ ಮಾಡಬೇಕು ಎಂದು ಸುರೇಶ್ ಪ್ರಭು, ಸುಬ್ರಾಯ ಹಾಗೂ ರತ್ನಾಕರರವರು ಆಗ್ರಹಿಸಿದ್ದು ಶೇ.16 ರಿಂದ ಶೇ.18ಕ್ಕೆ ಏರಿಕೆ ಮಾಡುವುದಾಗಿ ಅಧ್ಯಕ್ಷ ನವೀನ್ ಡಿ ಘೋಷಣೆ ಮಾಡಿದರು. ಕೃಷಿಯೇತರ ದೀರ್ಘಾವಧಿ ಸಾಲದ ಮೊತ್ತವನ್ನು ರೂ.25 ಲಕ್ಷಕ್ಕೆ ಏರಿಕೆ ಮಾಡುವಂತೆ ಸದಸ್ಯರು ಒತ್ತಾಯಿಸಿದ್ದು ಆಡಳಿತ ಮಂಡಳಿಯು ಇದಕ್ಕೆ ಒಪ್ಪಿಗೆ ಸೂಚಿಸಿದೆ. ಸಾಲ ಮರು ಪಾವತಿಯ ಅವಧಿಯನ್ನು ಆಡಳಿತ ಮಂಡಳಿ ಸಭೆಯಲ್ಲಿ ತಿರ್ಮಾನಿಸುವುದಾಗಿ ಅಧ್ಯಕ್ಷ ನವೀನ್ ತಿಳಿಸಿದರು.


ಸಂಘಕ್ಕೆ ಸದಸ್ಯರಿಂದ ಅಭಿನಂದನೆ:
ಸಹಕಾರಿ ಸಂಘದ ಮುಖಾಂತರ ಮರಣ ಸಾಂತ್ವನ ನಿಧಿ, ಶವ ಸಂಸ್ಕಾರ ಪೆಟ್ಟಿಗೆ, ಕೃಷಿ ಸಲಕರಣಗಳು ಮೊದಲಾದ ರೈತರಿಗೆ ಅನುಕೂಲಕರವಾದ ಯೋಜನಗಳ ಜಾರಿ, ವರದಿ ಸಾಲಿನಲ್ಲಿ ಐತಿಹಾಸಿ ಲಾಭ ಗಳಿಸಲು ಕಾರಣಿಕರ್ತರಾರ ಹಿಂದಿನ ಹಾಗೂ ಈಗಿನ ಆಡಳಿತ ಮಂಡಳಿ, ಸಿಬಂದಿ ವರ್ಗ, ಡಿವಿಡೆಂಡ್‌ನ್ನು ಶೇ.16ರಿಂದ ಶೇ.18ಕ್ಕೆ ಏರಿಕೆ ಮಾಡಿದ ಆಡಳಿತ ಮಂಡಳಿ, ಕೃಷಿಯೇತರ ದೀರ್ಘಾವಧಿ ಸಾಲವನ್ನು ರೂ,೨೫ಲಕ್ಷದ ತನಕ ಏರಿಕೆ ಮಾಡಿರುವುದಕ್ಕೆ ಸದಸ್ಯರು ಅಭಿನಂದನೆ ಸಲ್ಲಿಸಿದರು.


ಸನ್ಮಾನ:
ಸಂಘದ ಹಿರಿಯ ಸದಸ್ಯರಾದ ಲಕ್ಷ್ಮೀಶ ತೋಳ್ಪಾಡಿ, ಅವಿನಾಶ್ ಕೊಡಂಕಿರಿ, ತಿಮ್ಮಪ್ಪ ಹೆಗ್ಡೆ, ಕೃಷ್ಣಪ್ಪ ಪೂಜಾರಿ, ಎಲ್ಯಣ್ಣ ಪೂಜಾರಿ, ರಾಮಣ್ಣ ಮೂಲ್ಯ, ನಾಗರತ್ನ ಪಿ.ಆರ್., ಕೂಸಪ್ಪ ಗೌಡ, ಸೇಸಮ್ಮ, ಅದ್ರಾಮ ಬ್ಯಾರಿ, ನಾಗಪ್ಪ ಗೌಡ, ಕುಂಞ, ಗಿರಿಜಾ, ಯೋಗೀಶ್ ನಾೖಕ್, ಪ್ರೇಮ, ವಸಂತ ಕುಮಾರ್, ಕೂಸಪ್ಪ ಗೌಡ, ಚಂದ್ರಶೇಖರ ನಾೖಕ್, ನಾರಾಯಣ ಎಸ್.ಪಿ., ಕೃಷ್ಣ ಬೈಪಾಡಿತ್ತಾಯ, ಮಂಜುನಾಥ ಶೇಖ, ಬಾಲಕೃಷ್ಣ ಪ್ರಭುರವರನ್ನು ಮಹಾಸಭೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.


ನಿರ್ದೇಶಕರಾದ ಯಂ.ಪರಮೇಶ್ವರ ಭಂಡಾರಿ ಮಣಿಯ, ವಿ.ಬಾಬು ಶೆಟ್ಟಿ ವೀರಮಂಗಲ, ವಿಶ್ವನಾಥ ಬಲ್ಯಾಯ ಮುಂಡೋಡಿ, ಕೆ.ಪ್ರವೀಣ್ ಕುಮಾರ್ ಶೆಟ್ಟಿ, ನಮಿತ ನಾಕ್, ಜಯರಾಮ ಪೂಜಾರಿ ಒತ್ತೆಮುಂಡೂರು, ದೇವಪ್ಪ ಗೌಡ ಓಲಾಡಿ, ದೇವಪ್ಪ ಪಜಿರೋಡಿ, ಬಿ.ಶಿವಪ್ರಸಾದ್ ನಾಯ್ಕ, ಚಂದ್ರ ಮಣಿಯ, ಜಿಲ್ಲಾ ಬ್ಯಾಂಕ್ ನ ಪ್ರತಿನಿಧಿ ವಸಂತ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸದಸ್ಯೆ ವಸಂತಿ ರೈ ಪ್ರಾರ್ಥಿಸಿದರು. ಅಧ್ಯಕ್ಷ ನವೀನ್ ಡಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ ಎಚ್ ಲೆಕ್ಕಪತ್ರ, ಆಯವ್ಯಯ ಮಂಡಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಕೆ ವರದಿ ವಾಚಿಸಿದರು. ಉಪಾಧ್ಯಕ್ಷೆ ಪವಿತ್ರಾ ಕೆ.ಪಿ. ವಂದಿಸಿದರು. ಸಿಬಂದಿಗಳಾದ ಜಯರಾಮ ಬಿ., ರೋಹಿತ್ ಪಿ., ಅಶ್ವಿತಾ ಎ, ರೇಶ್ಮಾ ಎಂ., ನಳಿನಿ ಬಿ.ಕೆ., ಮೇಘ, ಜಿತೇಶ್ ಯಸ್, ಶ್ರಾವ್ಯ ಎ ಸಹಕರಿಸಿದರು.

LEAVE A REPLY

Please enter your comment!
Please enter your name here