ಕೇವಲ 600 ರೂಪಾಯಿಗಳಿಗೆ ಸ್ಕ್ಯಾನಿಂಗ್ ಸೌಲಭ್ಯ (ಒಂದು ದಿನ ಮಾತ್ರ) – ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7899555300
ಕಡಬ: ಜೇಸಿಐ ಕಡಬ ಕದಂಬ, ಕಡಬ ಮೆಡಿಕಲ್ ಸೆಂಟರ್, ಫೆಡರಲ್ ಬ್ಯಾಂಕ್ ಕಡಬ ಶಾಖೆ ಹಾಗೂ ಕಿರಣ್ ಮಹಿಳಾ ತಾಲೂಕು ಒಕ್ಕೂಟ ಕಡಬ ಇವುಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೆ.17ರ ಮಂಗಳವಾರ ಕಡಬ ಮೆಡಿಕಲ್ ಸೆಂಟರ್ ಕಳಾರದಲ್ಲಿ ನಡೆಯಲಿದೆ.
ಈ ಶಿಬಿರವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟನೆ ಮಾಡಲಿದ್ದು, ಜೇಸಿಐ ಕಡಬ ಕದಂಬದ ಅಧ್ಯಕ್ಷರಾದ ಝಫೀರ್ ಮಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಫೆಡರಲ್ ಬ್ಯಾಂಕ್ ಕಡಬದ ಶಾಖಾ ವ್ಯವಸ್ಥಾಪಕರಾದ ಧನರಾಜ್ ಭಾಗವಹಿಸಲಿದ್ದಾರೆ. ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಜೆಎಫ್ ಪಿ ನಾಗರಾಜ್ ಎನ್ ಕೆ ಹಾಗೂ ಕಿರಣ್ ಮಹಿಳಾ ತಾಲೂಕು ಒಕ್ಕೂಟ ಕಡಬ ಇದರ ಕೋಶಾಧಿಕಾರಿ ಸೂಸಮ್ಮ ಉಪಸ್ಥಿತರಿರುವರು.
CBC, RBS, Total cholesterol, creatinine, sugar(ಮಧುಮೇಹ), BP (ರಕ್ತದೊತ್ತಡ) ವೈದ್ಯಕೀಯ ತಪಾಸಣೆ ನಡೆಯಲಿದ್ದು, ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ದಿನದಂದು ಸ್ಕ್ಯಾನಿಂಗ್ ಸೌಲಭ್ಯವನ್ನು ಕೇವಲ 600 ರೂಪಾಯಿಗಳಿಗೆ ನೀಡಲಾಗುವುದು. (ಒಂದು ದಿನ ಮಾತ್ರ)
ಸ್ತ್ರೀ ತಜ್ಞ ವೈದ್ಯರು ಪ್ರತೀ ಶುಕ್ರವಾರ 3:30ರಿಂದ ಲಭ್ಯವಿರುತ್ತಾರೆ ಹಾಗೂ ಹೃದ್ರೋಗ ತಜ್ಞರು ತಿಂಗಳ ನಾಲ್ಕನೇ ಶನಿವಾರ 10 ರಿಂದ 12 ಲಭ್ಯವಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7899555300