ಉಪ್ಪಿನಂಗಡಿ: ಇಲ್ಲಿನ ವೇದಶಂಕರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಹೊಸದಾಗಿ ಬಾಲಗೋಕುಲ ಸಂಸ್ಕಾರ ಶಿಕ್ಷಣ ಕೇಂದ್ರವು ಸೆ.15ರಂದು ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ನೆರವೇರಿಸಿದ ಶಿಶು ಮಂದಿರದ ಪೋಷಕಿ ವಿನಯಾ, ಜೀವನದಲ್ಲಿ ಸಂಸ್ಕಾರ ಶಿಕ್ಷಣವನ್ನು ಅಳವಡಿಸಿಕೊಳ್ಳುವುದರಿಂದ ಬದುಕನ್ನು ಪ್ರಜ್ವಲ್ಯಮಾನವಾಗಿಸಲು ಸಾಧ್ಯ ಎಂದರು.
ಮುಖ್ಯ ಅಥಿಗಳಾಗಿ ಭಾಗವಹಿಸಿದ ಶಿಶು ಮಂದಿರದ ಆಡಳಿತ ಮಂಡಳಿ ಸದಸ್ಯ ಯು. ರಾಜೇಶ್ ಪೈ , ಶಾಲಾ ಕಾಲೇಜಿನ ಮಕ್ಕಳೂ ಸಂಸ್ಕಾರದ ಬಿಂದುಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರನ್ನು ಸಮಾಜಕ್ಕೆ ಸಂಪತ್ತಾಗಿಸುವಲ್ಲಿ ಬಾಲಗೋಕುಲಗಳು ಪರಿಣಾಮಕಾರಿಯಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಜಯಶ್ರೀ ಜನಾರ್ದನ್ ಮಾತನಾಡಿ, ಶಾಲಾ ಪಠ್ಯಗಳಲ್ಲಿ ದೊರೆಯದ ನೀತಿ ಶಿಕ್ಷಣ , ರಾಷ್ಟ್ರ ಪ್ರಜ್ಞೆ, ಧರ್ಮ ಪ್ರಜ್ಞೆಯನ್ನು ಮಕ್ಕಳಿಗೆ ಕಲಿಸುವ ಮತ್ತು ಕಲಿಯುವ ಅವಶ್ಯಕತೆಯನ್ನು ಬಾಲಗೋಕುಲಗಳಿಂದ ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಿಶು ಮಂದಿರದ ಆಡಳಿತ ಮಂಡಳಿಯ ಕಂಗ್ವೆ ವಿಶ್ವನಾಥ ಶೆಟ್ಟಿ, ಕರಾಯ ರಾಘವೇಂದ್ರ ನಾಯಕ್, ಉದಯ ಕುಮಾರ್, ಮುಖ್ಯ ಮಾತಾಜಿ ಚೈತ್ರಾ ಕೆಮ್ಮಾರ , ಸಹಾಯಕ ಮಾತಾಜಿ ಚಂದ್ರಾವತಿ ಭಾಗವಹಿಸಿದ್ದರು.ಬಾಲಗೋಕುಲದ ಪ್ರಮುಖ್ ಕುಮಾರಿ ದೀಕ್ಷಾ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರಿ ರಶಿಕಾ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಪೂಜಾ ಸ್ವಾಗತಿಸಿ, ಶ್ರುತಿ ಅಲಗುರಿಮಜಲು ವಂದಿಸಿದರು.