ಮುಕ್ರಂಪಾಡಿ ಬಾಲಕಿಯರ ಪ.ಪೂ.ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಭೆ

0

ಪುತ್ತೂರು: ಮುಕ್ರಂಪಾಡಿಯಲ್ಲಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಸೆ.14ರಂದು 2024-25ನೇ ಸಾಲಿನ ಪ್ರಥಮ ಶಿಕ್ಷಕ-ರಕ್ಷಕ ಸಭೆ ಜರಗಿತು. ನಿವೃತ್ತ ಪ್ರಾಂಶುಪಾಲ ಸೂರ್ಯನಾರಾಯಣ ಭಟ್‌ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಕ್ಕಳು ಬಣ್ಣ ಬಣ್ಣದ ಗಾಳಿಪಟಗಳಿದ್ದಂತೆ, ಅವರ ಹಗ್ಗ ಶಿಕ್ಷಕರು ಹಾಗೂ ಹೆತ್ತವರ ಕೈಯಲ್ಲಿದೆ. ಎತ್ತರಕ್ಕೆ ಸರಿ ದಿಕ್ಕಿನತ್ತ ಹಾರಿಸುವ ಜವಾಬ್ದಾರಿ ಇದೆ. ಹೆತ್ತವರು ಮಕ್ಕಳಿಗೆ ಸಮಯ ನೀಡುವ ಅನಿವಾರ್ಯತೆಯಿದೆ. ಶಿಕ್ಷಣವೇ ಶಕ್ತಿ, ಮಕ್ಕಳಲ್ಲಿ ನಕಾರಾತ್ಮಕ ಧೋರಣೆಯನ್ನು ನಾಶಮಾಡಿ ಸಕಾರಾತ್ಮಕ ಧೋರಣೆ ಬೆಳೆಯಲು ಶಿಕ್ಷಕರು- ಹೆತ್ತವರು ಪ್ರಯತ್ನಿಸೋಣ ಎಂದು ಮಾರ್ಗದರ್ಶನ ಮಾಡಿದರು.

ಸಭಾಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರಮೀಳ ಜೆಸ್ಸಿ ಕ್ರಾಸ್ತಾ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಮಲ್ಲಿಕಾ ಜೆ. ರೈ, ಸದಸ್ಯರಾದ ಕೌನ್ಸಿಲರ್ ಇಂದಿರಾ ಪುರುಷೋತ್ತಮ್, ಸದಸ್ಯರಾದ ಚಂದ್ರಕಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಹೃದಯ ಜ್ಯೋತಿ ಮತ್ತು ಶ್ರೇಯಾ ಪ್ರಾರ್ಥಿಸಿದರು. ಉಪನ್ಯಾಸಕಿ ಶೋಭಾ ಕೆ ಸ್ವಾಗತಿಸಿದರು. ನಿಸ್ನಾನ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ದಾಮೋದರ್ ವಂದಿಸಿದರು. ವಿದ್ಯಾರ್ಥಿನಿಯರ ಹೆತ್ತವರು ಭಾಗವಹಿಸಿದ್ದರು. ಸಂಸ್ಥೆಯಲ್ಲಿ ಇರುವ ಸೌಲಭ್ಯಗಳು, ಶೈಕ್ಷಣಿಕ ಸಾಧನೆಗಳು, ತಾಲೂಕು ಮಟ್ಟದ ಖೋ ಖೋ ಸ್ಪರ್ಧೆ ನಡೆಸುವ ಜವಾಬ್ದಾರಿ ಹಾಗೂ ಕಾಲೇಜಿನಲ್ಲಿ ಇರುವ ಕೆಲವೊಂದು ಕೊರತೆಗಳ ಬಗ್ಗೆ ಈ ಸಂದರ್ಭದಲ್ಲಿ ಪ್ರಾಂಶುಪಾಲರು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here