ನೃತ್ಯಾಂತರಂಗ ಸರಣಿ ಕಾರ್ಯಕ್ರಮದಲ್ಲಿ ರಂಜಿಸಿದ ‘ವರ್ಣಿಕ-3’

0

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 116ನೇ ಸರಣಿಯಲ್ಲಿ ವರ್ಣಿಕ- 3 ಶೀರ್ಷಿಕೆಯಲ್ಲಿ ಸಂಸ್ಥೆಯ ಹಿರಿಯ ಕಲಾವಿದರಾದ ವಿದ್ವಾನ್ ಗಿರೀಶ್ ಕುಮಾರ್ ಮತ್ತು ವಿದುಷಿ ವಸುಧಾ ಜಿ.ಎನ್. ಇವರಿಂದ ವರ್ಣಗಳ ವಿಶೇಷ ಪ್ರಸ್ತುತಿ ‘ವರ್ಣಿಕ-3’ ನಡೆಯಿತು.


ಗಿರೀಶ್ ಇವರು ದರು ವರ್ಣ ನರ್ತಿಸಿದರೆ ವಸುಧಾರವರು ಪದವರ್ಣ ಪ್ರಸ್ತುತಪಡಿಸಿದರು. ಎಸ್.ಡಿ.ಪಿ. ರೆಮೆಡೀಸ್ & ರಿಸರ್ಚ್ ಸೆಂಟರಿನ ಹಿರಿಯ ಮ್ಯಾನೇಜರ್ ಹಾಗೂ ಭರತನಾಟ್ಯ ಕಲಾವಿದೆ ವಿದುಷಿ ಮೇಘನಾ ಪಾಣಾಜೆಯವರು ಅಭ್ಯಾಗತರಾಗಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ಹಿಮ್ಮೇಳದಲ್ಲಿ ನಟುವಾಂಗದಲ್ಲಿ ಗುರು ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಗಿತೇಶ್ ನೀಲೇಶ್ವರ ಹಾಗೂ ಕೊಳಲಿನಲ್ಲಿ ರಾಜಗೋಪಾಲನ್ ಕಾಞಂಗಾಡ್ ಇವರು ಸಹಕರಿಸಿದ್ದರು

LEAVE A REPLY

Please enter your comment!
Please enter your name here