





ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ಮತ್ತು ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಸೆ.18ರಂದು ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರುರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ನಿವೃತ್ತ ಶಿಕ್ಷಕರಾದ ಮಹಾಬಲ ರೈ ಯವರು ವಿದ್ಯಾರ್ಥಿಗಳಿಗೆ ಜೀವನದ ಮುಖ್ಯ ಉದ್ದೇಶ ಹಾಗೂ ಗುರಿಗಳ ಬಗ್ಗೆ ವಿವರಿಸುತ್ತಾ ಮನೆಯ ವಾತಾವರಣ ಕಲಿಯುವಿಕೆಗೆ ತೊಡಕಾಗುವಂತಿರಬಾರದು. ಮಕ್ಕಳು ದುಶ್ಚಟದ ವಿರುದ್ಧ ಮನೆಯಲ್ಲಿ ಹಿರಿಯರನ್ನು ಬುದ್ಧಿ ಹೇಳಿ ಬದಲಿಸಬೇಕು, ವಿದ್ಯಾರ್ಥಿಗಳು ಮದ್ಯ, ತಂಬಾಕು, ಗಾಂಜಾ ಮುಂತಾದ ದುಶ್ಚಟಗಳಿಗೆ ಬಲಿಯಾಗದಂತೆ ದೂರ ಇರಬೇಕೆಂದು ತಿಳಿಸಿದರು.





ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂಬ್ರ ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ನಡೆಸಿ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಉತ್ತಮ ಜೀವನ ನಡೆಸಬೇಕು ದುಶ್ಚಟಕ್ಕೆ ಬಲಿಯಾಗದೆ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬದುಕುವಂತೆ ಶುಭಹಾರೈಸಿದರು.
ವೇದಿಕೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶರ್ಮಿಳಾ ಗ್ಲಾಡಿನ್, ಕುಂಬ್ರ ವಲಯಾಧ್ಯಕ್ಷರಾದ ಎಸ್ ಮಾಧವ ರೈ ಕುಂಬ್ರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜ್ಞಾನವಿಕಾಸದ ಸಂಯೋಜಕಿ ರಾಜೀವಿ, ಸೇವಾಪ್ರತಿನಿಧಿ ಶಶಿಕಲಾ, ಕಾಲೇಜು ಬೋಧಕ ವೃಂದದವರು ಉಪಸಿದ್ಧರಿದ್ದರು. ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ ಸ್ವಾಗತಿಸಿ, ಉಪನ್ಯಾಸಕಿ ಹರ್ಷಿತಾ ವಂದಿಸಿದರು. ಕುಂಬ್ರ ವಲಯದ ಮೇಲ್ವಿಚಾರಕಿ ಮೋಹಿನಿ ಎಸ್ ಗೌಡ ಕಾರ್ಯಕ್ರಮ ನಿರೂಪಿಸಿದರು.









