ವಿಟ್ಲ: ಜೋಗಿ ಯುವ ಬ್ರಿಗೇಡ್ ವಿಟ್ಲ ಇದರ ಆಶ್ರಯದಲ್ಲಿ ಪ್ರಥಮ ವರ್ಷದ ಕ್ರೀಡಾ ಸಂಗಮ ಕಾರ್ಯಕ್ರಮವು ವಿಟ್ಲ RMSA ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾ ಸಂಗಮ ಕಾರ್ಯಕ್ರಮವನ್ನು ಯೋಗೇಶ್ವರ (ಜೋಗಿ)ಮಠದ, ಪೀಠಾಧಿಪತಿಗಳಾದ ಶ್ರೀ ಶ್ರದ್ದಾನಾಥ್ ಮಹಾರಾಜ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಜೋಗಿ ಸಮಾಜದ ಪ್ರಮುಖರಾದ ಯಶವಂತ ವಿಟ್ಲ, ಚಿತ್ರ ಜೋಗಿ ಮಂಗಳೂರು,ಗೋಪಾಲ್ ಜೋಗಿ ಕಾಸರಗೋಡು, ಪಿ ಕೆ ದಾಮೋದರ್ ಪಡಿಬಾಗಿಲು, ನವನಾಥ್ ಜೋಗಿ ವಿಟ್ಲ, ಚಂದ್ರನಾಥ್ ಜೋಗಿ ಸಜೀಪ,ಗಣೇಶ್ ನಾಥ್ ಜೋಗಿ ಸಜೀಪ, ಪ್ರಜ್ವಲ ಆನಂದ್ ವಿಟ್ಲ, ಕುಸುಮ ಶಿವಪ್ಪ ಜೋಗಿ ಬಾಯರು, ಗಿರೀಶ್ ಜೋಗಿ ಪುದ್ದೋಟ್ಟು, ಚಂದ್ರಶೇಖರ ಜೋಗಿ ಬಾಯಾರು, ನಾಗೇಶ್ ಜೋಗಿ ಕಾಪುಮಜಲು, ಮಹೇಶ್ ಜೋಗಿ ಮಂಗಳೂರು, ಪಿ ಕೆ ಗಣೇಶ್ ಪುತ್ತೂರು, ರಘುರಾಮ್ ಜೋಗಿ ಮಂಗಳೂರು, ಗಂಗಾಧರ್ ಜೋಗಿ ಮಳಲಿ ಮಟ್ಟಿ, ಶೇಖರ್ ಜೋಗಿ ಮಂಗಳೂರು, ಗಿರೀಶ್ ಜೋಗಿ ಕಣಂದೂರು, ಸಂಜೀವ ಜೋಗಿ ಮುಡಿಪು, ಸಂಜೀವ ಜೋಗಿ ಸಾಲೆತ್ತೂರು, ಸೂರ್ಯಕಾಂತಿ ರಮೇಶ್ ಜೋಗಿ ಮಿತ್ತನಡ್ಕ, ಸತೀಶ್ ಬದ್ಯಾರ್ ಮುಡಿಪು, ರಮೇಶ್ ಜೋಗಿ ಕನ್ಯಾನ, ಗೋಪಾಲ್ ಜೋಗಿ ಕಾಪುಮಜಲು, ಚಂದ್ರಕಲಾ ಮಂಗಳೂರು, ಜೋಗಿ ಯುವ ಬ್ರಿಗೇಡ್ ಅಧ್ಯಕ್ಷರಾದ ಸಂದೀಪ್ ಜೋಗಿ ವಿಟ್ಲ, ಉಪಾಧ್ಯಕ್ಷರಾದ ರಂಜಿತ್ ಜೋಗಿ ಕಾಪುಮಜಲು ಮೊದಲಾದವರು ಉಪಸ್ಥಿತರಿದ್ದರು.
ಶ್ವೇತಾ ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.ರವಿಕುಮಾರ್ ಪ್ರಾಸ್ತ್ರವಿಕ ಮಾತುಗಳನ್ನಾಡಿದರು. ಹರ್ಷಿತಾ ವಂದಿಸಿದರು. ಜೋಗಿ ಸಮಾಜದ ಎಲ್ಲಾ ವಲಯದ ಬಾಂದವರು ಪಾಲ್ಗೊಂಡರು. ಮಕ್ಕಳು ಮಹಿಳೆಯರು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.