ಪುತ್ತೂರು: ಬನ್ನೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಪುತ್ತೂರು ಜನ ಜಾಗೃತಿ ವೇದಿಕೆ ಬನ್ನೂರು ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬನ್ನೂರು ವಲಯ ಇದರ ಜಂಟಿ ಆಶ್ರಯದಲ್ಲಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾಯಿಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ ಮಾತನಾಡಿ ಇಂದಿನ ಮಕ್ಕಳು ಮುಂದಿನ ಜನಾಂಗ ಎನ್ನುವಂತೆ ಮಕ್ಕಳ ಉತ್ತಮ ಭವಿಷ್ಯದ ಬಗ್ಗೆ ದುಶ್ಚಟದಿಂದಾಗುವ ಪರಿಣಾಮಗಳ ಬಗ್ಗೆ ಪೋಕ್ಸೋ ಕಾಯ್ದೆ ಬಗ್ಗೆ ಮಕ್ಕಳು ಮಾದಕ ದ್ರವ್ಯದ ಚಟವನ್ನು ಬೆಳೆಸಿಕೊಂಡರೆ ಜೀವನವೇ ಹಾಳಾಗುವುದು .ದುಶ್ಚಟಗಳನ್ನು ಬೆಳೆಸಿಕೊಳ್ಳದೆ ಇದ್ದರೆ ಆರೋಗ್ಯದಿಂದಿರಲು ಸಾಧ್ಯ ಎಂದು ಮಾಹಿತಿ ನೀಡಿದರು. ಸ್ವಾಸ್ಥ್ಯ ಸಂಕಲ್ಪ ಎನ್ನುವ ಕಾರ್ಯಕ್ರಮವನ್ನು ನಡೆಸಬೇಕಾದರೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರಿಂದ ಮಾತ್ರ ಸಾಧ್ಯ ಎಂದು ಶ್ಲಾಘಿಸಿದರು.
ಜನಜಾಗೃತಿ ವಲಯ ಅಧ್ಯಕ್ಷ ರಾಮಣ್ಣ ಗುಂಡೇರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಜನಜಾಗೃತಿ ಸದಸ್ಯರಾದ ನಾರಾಯಣ ಭಟ್ ಅವರು ಮಾತನಾಡಿ ನಮ್ಮನ್ನು ನಾವೇ ರಕ್ಷಣೆ ಮಾಡಬೇಕಾದರೆ ಒಳ್ಳೆಯ ಪ್ರಜೆಯಾಗಿ ಬಾಳಬೇಕಾದರೆ ಪ್ರತಿಜ್ಞೆ ಮಾಡಬೇಕು ಎಂದು ಹೇಳಿ ಪ್ರತಿಜ್ಞೆ ಮಾಡಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಮರಿಯಮ್ಮ ಮಾತನಾಡಿ ಮಕ್ಕಳಿಗೆ ಈ ರೀತಿ ಮಾಹಿತಿ ಬೇಕಾಗಿದೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಉಪಯುಕ್ತ ಮಾಹಿತಿಯನ್ನು ನೀಡುತ್ತಾರೆ ಎಂದು ಅಭಿನಂದನೆ ಸಲ್ಲಿಸಿದರು.
ಪೋಷಕ ಸೇವಾ ಪ್ರತಿನಿಧಿ ವೀಣಾ ಸ್ವಾಗತಿಸಿದರು.ಶಾಲಾ ದೈಹಿಕ ಶಿಕ್ಷಕರಾದ ಕುಸುಮಾವತಿ ವಂದಿಸಿದರು. ಬನ್ನೂರು ವಲಯ ಮೇಲ್ವಿಚಾರಕಿ ಸುನಿತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಘಟಕ ಸೇವಾ ಪ್ರತಿನಿಧಿ ಕಮಲಾ ಮತ್ತು ತರಬೇತುದಾರರು, ಮೇಲ್ವಿಚಾರಕರು ಉಪಸ್ಥಿತರಿದ್ದರು.