ಪುತ್ತೂರು: ಪುತ್ತೂರಿನ ಎಪಿಎಂಸಿ ರಸ್ತೆ ನಿವಾಸಿ, ಲೇಖಕಿ, ಅನುವಾದಕಿ, ಕವಯತ್ರಿಯಾಗಿರುವ ಫ್ಲಾವಿಯಾ ಆಲ್ಬುಕರ್ಕ್ ಇವರು ಅನುವಾದಿಸಿದ ವಾರಿಸ್ ಡಿರಿಯರವರ ಆತ್ಮಕಥೆ “ಡೆಸರ್ಟ್ ಫ್ಲವರ್” ಇದರ ಕೊಂಕಣಿ ಭಾಷೆಯಲ್ಲಿ “ರೇಗಿಸ್ಥಾನಾಂತ್ಲೆ ಫುಲ್” ಈ ಪುಸ್ತಕವನ್ನು ಸೆ.22ರಂದು ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ.ಲಾರೆನ್ಸ್ ಮಸ್ಕರೇನ್ಹಸ್ ರವರಿಂದ ಲೋಕಾರ್ಪಗೊಂಡಿತು.
ಸಹಾಯಕ ಧರ್ಮಗುರು ವಂ.ರೂಪೇಶ್ ಮಾಡ್ತಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಕಾರ್ಯದರ್ಶಿ ಎವ್ಲಿನ್ ಡಿ’ಸೋಜ, 21 ಆಯೋಗಗಳ ಸಂಚಾಲಕರು ಜೋನ್ ಡಿಸೋಜ ಉಪಸ್ಥಿತರಿದ್ದರು.