ದರ್ಬೆ ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ -ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

0

ಪುತ್ತೂರು: ಮನೆಯೊಂದರಲ್ಲಿ ವಾಷಿಂಗ್ ಮೆಷೀನ್ ಸ್ವಿಚ್ ಬೋರ್ಡ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಉಂಟಾದ ಬೆಂಕಿ ಅನಾಹುತವನ್ನು ಅಗ್ನಿ ಶಾಮಕದಳದವರು ತಕ್ಷಣ ಬೆಂಕಿಯನ್ನು ನಂದಿಸುವ ಮೂಲಕ ಸಂಭಾವ್ಯ ಅನಾಹುತವನ್ನು ತಡೆದು ಸಮಯಪ್ರಜ್ಞೆ ಮೆರೆದ ಘಟನೆಯೊಂದು ಪುತ್ತೂರು ದರ್ಬೆಯಲ್ಲಿ ನಡೆದಿದೆ.


ಪುತ್ತೂರು ಕೆ ವಿ ಶೆಣೈ ಪೆಟ್ರೋಲ್ ಪಂಪ್ ನ ಮಾಲಕ ವಿಶ್ವಾಸ್ ಶೆಣೈ ಅವರ ದರ್ಬೆ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಾಣಿಸಿಕೊಂಡ ದಟ್ಟ ಹೊಗೆಯಿಂದ ಭಯಭೀತರಾದ ಅವರ ಪತ್ನಿ ವಿಶ್ವಾಸ್ ಶೆಣೈ ಅವರಿಗೆ ಕರೆ ಮಾಡಿದ್ದರು. ಪೆಟ್ರೋಲ್ ಪಂಪ್ ನಲ್ಲಿದ್ದ ವಿಶ್ವಾಸ್ ಶೆಣೈ ಅವರು ಗಾಬರಿಗೊಂಡು ಸಂಸ್ಥೆಯ ಸಿಬ್ಬಂದಿಗಳಲ್ಲಿ ಅಗ್ನಿ ಶಮನಗೊಳಿಸುವ ( ಎಬಿಸಿ ಪೌಡರ್ ) ಸಾಧನವನ್ನು‌ ಕೇಳುತ್ತಿರುವುದನ್ನು ಇಲಾಖಾ ವಾಹನಕ್ಕೆ ಇಂಧನಕ್ಕೆ ಬರುವ ಪೇಪೆಂಟ್ ಚೆಕ್ ಮಾಡಲು ಅಲ್ಲಿಗೆ ಬಂದಿದ್ದ ಅಗ್ನಿಶಾಮಕ ಪುತ್ತೂರು ಠಾಣಾಧಿಕಾರಿ ಶಂಕರ್ ಮತ್ತು ಸಿಬ್ಬಂದಿ ತೌಸೀಫ್ ಮುಲ್ಲಾ ಅವರು ಗಮನಿಸಿ ವಿಶ್ವಾಸ್ ಶೆಣೈ ಅವರಲ್ಲಿ ವಿಚಾರಿಸಿದರಲ್ಲದೆ ತಕ್ಷಣ ವಿಶ್ವಾಸ್ ಶೆಣೈ ಅವರ ವಾಹನದಲ್ಲೆ ಅವರ ಮನೆಗೆ ಹೋಗಿ ವಾಷಿಂಗ್ ಮೆಷಿನ್ ಗೆ ಹತ್ತಿಕೊಂಡ ಬೆಂಕಿಯನ್ನು (ಎಬಿಸಿ ಪೌಂಡರ್) ಶಮನಗೊಳಿಸುವಲ್ಲಿ ಯಶಸ್ವಿಯಾದರು. ಅಗ್ನಿಶಾಮಕದಳದ ಅಧಿಕಾರಿಗಳ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here