ಅ. 3ರಿಂದ ಪುತ್ತೂರು ಮಹಾಮಾಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ

0

ಪುತ್ತೂರು: ನವರಾತ್ರಿ ಪ್ರಯುಕ್ತ ಪುತ್ತೂರು ಶ್ರೀ ಮಹಾಮಾಯ ದೇವಸ್ಥಾನದಲ್ಲಿ ಅ.3 ಗುರುವಾರದಿಂದ , ಅ.13 ರವಿವಾರದವರೆಗೆ ನವರಾತ್ರಿ ಉತ್ಸವ ನಡೆಯಲಿದೆ.


ಪ್ರತೀ ದಿನ ಮಧ್ಯಾಹ್ನ ಗಂಟೆ 1:30 ಗೆ ಮಹಾಪೂಜೆ, ರಾತ್ರಿ 9 ಗಂಟೆಗೆ ದುರ್ಗಾನಮಸ್ಕಾರ ಪೂಜೆ, ರಾತ್ರಿ 9:30ಕ್ಕೆ ರಾತ್ರಿ ಪೂಜೆ ನಡೆಯಲಿದೆ. ಅ.11 ಶುಕ್ರವಾರ ದುರ್ಗಾಷ್ಟಮಿ , ಅ.12 ಶನಿವಾರ ಮಹಾನವಮಿ ಚಂಡಿಕಾಯಾಗ ,ಮಧ್ಯಾಹ್ನ 1:30ಕ್ಕೆ ಪೂರ್ಣಾಹುತಿ , ಮಧ್ಯಾಹ್ನ 2:00 ಕ್ಕೆ ಮಹಾಪೂಜೆ ಇರಲಿದೆ.ಮಧ್ಯಾಹ್ನ 2:30 ಗೆ ಪ್ರತೀ ದಿನ ಅನ್ನಸಂತರ್ಪಣೆ ನೆರವೇರಲಿದೆ ಎಂಬುವುದಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here