





ಪುತ್ತೂರು: ಮುರ-ಶಾಂತಿನಗರ ರಸ್ತೆ ಬದಿಯಲ್ಲಿ ಸ್ಥಳೀಯ ನಾಲ್ಕು ಮಂದಿ ಸೇರಿಕೊಂಡು ಅ.2ರಂದು ಸ್ವಚ್ಛತೆ ನಡೆಸಿದ್ದಾರೆ.


ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಗಿಡಗಂಟಿ ಪೊದೆಗಳನ್ನು ಕಡಿದು ತೆರವುಗೊಳಿಸುವ ಮೂಲಕ ಸ್ವಚ್ಛತಾ ಶ್ರಮದಾನ ನಡೆಸಿದ್ದಾರೆ. ಸ್ಥಳೀಯರಾದ ಉನೈಸ್, ಮಸೂದ್, ಮಹಮ್ಮದ್ ಹಾಗೂ ಸಿನ್ಸಾರ್ ಶ್ರಮಧಾನದಲ್ಲಿ ಭಾಗವಹಿಸಿದ್ದರು. ಇವರ ಸ್ವಚ್ಛತಾ ಕಾರ್ಯ ಸ್ಥಳೀಯವಾಗಿ ಪ್ರಶಂಸೆಗೆ ಪಾತ್ರವಾಗಿದೆ.







            







