





ಪುತ್ತೂರು: ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು ಇದರ ವತಿಯಿಂದ ಸಾಮಾಜಿಕ ಜಾಗೃತಿಯಡಿಯಲ್ಲಿ ʼಸರಳ ಕಾನೂನುಗಳ ಅರಿವಿಲ್ಲದೆ ಮೋಸಹೋಗದಿರಿʼ ಎಂಬ ಕಾನೂನು ಅರಿವು ಪುಸ್ತಕ ಬಿಡುಗಡೆ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯ ನಾಗರಿಕರ ಕಾಯ್ದೆ ಕುರಿತು ಉಪನ್ಯಾಸ ಕಾರ್ಯಕ್ರಮವು ಅ.8 ರಂದು ಸಂಜೆ 4 ಗಂಟೆಗೆ ದರ್ಬೆಯ ಸಚ್ಚಿದಾನಂದ ಸೇವಾ ಸದನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಸದುಪಯೋಗಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ಕೋರಿದೆ.












