ಪುತ್ತೂರು: ರಾಜ್ಯದ ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು 2024-25ನೇ ಸಾಲಿನ ವಿತ್ತೀಯ ವರ್ಷದ ಅರ್ಧ ವಾರ್ಷಿಕ ಅವಧಿ ಸೆ.30ಕ್ಕೆ ಒಟ್ಟು ರೂ. 548 ಕೋಟಿ ಠೇವಣಿ, ರೂ. 481 ಕೋಟಿ ಸಾಲ ಹಾಗೂ ರೂ. 1029 ಕೋಟಿ ವ್ಯವಹಾರವನ್ನು ಹೊಂದಿ, ಮಾರ್ಚ್ 2024ರಿಂದ ಒಟ್ಟು ವ್ಯವಹಾರದಲ್ಲಿ ರೂ. 43 ಕೋಟಿ ಹೆಚ್ಚಳ ಸಾಧಿಸಿರುವುದು. ಸೆ.30ಕ್ಕೆ ನಿವ್ವಳ ಲಾಭವು ರೂ. 4.61 ಕೋಟಿ ದಾಖಲಿಸಿದ್ದು, ಇದು ಕಳೆದ ವರ್ಷಕ್ಕಿಂತ ರೂ. 1.17 ಕೋಟಿ ಹೆಚ್ಚಳವಾಗಿ 34% ವೃದ್ಧಿಯಾಗಿರುತ್ತದೆ.
2023-24ನೇ ಸಾಲಿನಲ್ಲಿ ಸಂಘವು ತನ್ನ ಸದಸ್ಯರಿಗೆ ಶೇ.25 ಡಿವಿಡೆಂಡನ್ನು ನೀಡಿದ್ದು, ಸ್ಥಾಪನೆಯಾದನಿಂದ ನಿರಂತರ ಡಿವಿಡೆಂಡನ್ನು ನೀಡುತ್ತಾ ಬಂದಿದ್ದು, ಕಳೆದ ಆರು ವರ್ಷಗಳಿಂದ ಗರಿಷ್ಟ 25% ಡಿವಿಡೆಂಡನ್ನು ನೀಡುತ್ತಿದೆ.ಸೆ.30ಕ್ಕೆ ಸಂಘದ ಒಟ್ಟು ಅನುತ್ಪಾದಕ ಆಸ್ತಿ ರೂ. 30 ಲಕ್ಷದಷ್ಟು ಮಾತ್ರ ಇದ್ದು, ಇದು ಹೊರಬಾಕಿ ಸಾಲದ ಶೇ. 0.06ಕ್ಕೆ ಸೀಮಿತವಾಗಿರುತ್ತದೆ. ಸಂಘದಲ್ಲಿ ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ 17 ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿದ್ದು, ಸಾಲ ವಸೂಲಾತಿಯು ಉತ್ತಮವಾಗಿರುತ್ತದೆ. ರೂ. 1000 ಕೋಟಿ ಮೀರಿದ ಒಟ್ಟು ವ್ಯವಹಾರವನ್ನು ದಾಖಲಿಸಿದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಪ್ರಥಮ ಕ್ರೆಡಿಟ್ ಸಹಕಾರ ಸಂಘವಾಗಿ ಮೂಡಿಬಂದಿರುವುದು ಸಂಘದ ಸಾಧನೆಯ ವಿಶೇಷತೆ ಆಗಿರುವುದು. ಸಂಘದ ನಿರಂತರ ಪ್ರಗತಿಗೆ ಸಹಕರಿಸುತ್ತಿರುವ ಸಂಘದ ಎಲ್ಲಾ ಆಡಳಿತ ಮಂಡಳಿ ಸದಸ್ಯರುಗಳಿಗೆ, ಶಾಖಾ ಸಲಹಾ ಸಮಿತಿ ಅಧ್ಯಕ್ಷರುಗಳಿಗೆ ಹಾಗೂ ಸದಸ್ಯರುಗಳಿಗೆ, ಸಂಘದ ಸರ್ವ ಸದಸ್ಯ ಬಾಂಧವರಿಗೆ ಮತ್ತು ಹಿತೈಷಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಂಘದ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.