ಅರಿಯಡ್ಕ:ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ.ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳವೂ ವಿಳಂಬ ವಾಗಿದೆ, ಶಾಸಕರಿಗೆ ಬರುವ ಅನುದಾನ ಮರಿಚಿಕೆಯಾಗಿದೆ ಎಂದು ದ.ಕ ಲೋಕಸಭಾ ಸಂಸದ ಕ್ಯಾ, ಬ್ರಿಜೇಶ್ ಚೌಟ ಹೇಳಿದರು.
ಅವರು ಕುಂಬ್ರ ಸಿ.ಎ ಬ್ಯಾಂಕ್ ಸಭಾಭವನದಲ್ಲಿ ಅ.13 ರಂದು ವಿಧಾನ ಪರಿಷತ್ ಉಪಚುನಾವಣೆ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.ಪುತ್ತೂರಿನಲ್ಲಿ ನಮ್ಮ ಪಾರ್ಟಿಯ ಶಾಸಕರಿಲ್ಲ ಎಂಬ ಕೊರಗು ಕಾರ್ಯಕರ್ತರಲ್ಲಿ ಕಾಡುತ್ತಿದೆ.ಈ ನಿಟ್ಟಿನಲ್ಲಿ ನಮಗೊಂದು ಸುವರ್ಣ ಅವಕಾಶ ಬಂದಿದೆ.ನಮ್ಮ ಪುತ್ತೂರಿನ ನಿಷ್ಠಾವಂತ ಕಾರ್ಯಕರ್ತ ಕಿಶೋರ್ ಕುಮಾರ್ ಪುತ್ತೂರು ರವರಿಗೆ ವಿಧಾನ ಪರಿಷತ್ ಪ್ರವೇಶ ಮಾಡುವ ಅವಕಾಶ ದೊರಕಿರುವುದು, ನಮಗೆಲ್ಲರಿಗೂ ಸಂತಸದ ವಿಚಾರ.ನಮ್ಮ ಅಭ್ಯರ್ಥಿಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ,15ನೇ ಹಣಕಾಸಿನಲ್ಲಿ ಪಂಚಾಯತ್ ಗೆ ಅನುದಾನ ಬರುತ್ತಿದ್ದು, ಪಂಚಾಯತ್ ಅಭಿವೃದ್ಧಿಯಾಗುತ್ತಿದೆ.ಹಿಂದೆ ಪಂಚಾಯತ್ ಗೆ ಸಾಕಷ್ಟು ಅನುದಾನ ಬರುತ್ತಿರಲಿಲ್ಲ.ಈಗ ಕೇಂದ್ರ ಸರ್ಕಾರ ನೇರ ಅನುದಾನ ಬಿಡುಗಡೆ ಮಾಡುತ್ತಿದೆ.ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಕಿಶೋರ್ ಕುಮಾರ್ ಪುತ್ತೂರು ರವರನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಕರಾವಳಿ ಬಿಜೆಪಿಯ ಭದ್ರಕೋಟೆ ಎಂದು ಸಾಧಿಸಿ ತೋರಿಸ ಬೇಕಿದೆ ಎಂದರು.
ಜಿಲ್ಲಾ ಚುನಾವಣಾ ಸಂಚಾಲಕ,ಕ್ಯಾ, ಗಣೇಶ್ ಕಾರ್ಣಿಕ್ ಮಾತನಾಡಿ,ಈ ಚುನಾವಣೆ ಮುಂದಿನ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಗೆ ಅಡಿಪಾಯ ಆಗಿದ್ದು,ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.ಜಿಲ್ಲಾ ಚುನಾವಣಾ ಸಹ ಸಂಚಾಲಕ ರಾಕೇಶ್ ರೈ ಕಡೆಂಜಿ ಮತದಾನ ಮಾಡುವ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ತ್ಯಾಗ, ಬಲಿದಾನ, ಅಭಿವೃದ್ಧಿ ಕಾರ್ಯಗಳಿಗೆ ಹೆಸರುವಾಸಿಯಾದ ಪಾರ್ಟಿ ಬಿಜೆಪಿ.ವಿಧಾನ ಪರಿಷತ್ ಚುನಾವಣೆಗೆ ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಕೊಟ್ಟಿದೆ.ಇದು ನಮ್ಮ ಪಾರ್ಟಿಯಲ್ಲಿ ಮಾತ್ರ ಸಾಧ್ಯ.ಹುದ್ದೆಗೋಸ್ಕರ ಪಾರ್ಟಿಯಲ್ಲಿ ಯಾರು ಕೆಲಸ ಮಾಡುವುದಿಲ್ಲ.ಹಿಂದುತ್ವದ ಆಧಾರದಲ್ಲಿ ನಿಷ್ಠಾವಂತ ಕಾರ್ಯಕರ್ತರ, ಸ್ಥಳೀಯ ಜನಪ್ರತಿನಿಧಿಗಳ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ನಿತಿಶ್ ಶಾಂತಿವನ ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಓಬಿಸಿ ರಾಜ್ಯ ಕಾರ್ಯದರ್ಶಿ ನಾರಾಯಣ ಆರ್.ಸಿ,ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಚುನಾವಣಾ ಸಹ ಸಂಚಾಲಕ ಸಂತೋಷ್ ರೈ ಕೈಕಾರ, ಗ್ರಾಮಾಂತರ ಮಂಡಲದ ಪ್ರ.ಕಾರ್ಯದರ್ಶಿ ಉಮೇಶ್ ಕೋಡಿಬೈಲು,ನಗರ ಮಂಡಲದ ಪ್ರ.ಕಾರ್ಯದರ್ಶಿ ಅನಿಲ್ ತೆಂಕಿಲ ಮುಂತಾದವರು ಉಪಸ್ಥಿತರಿದ್ದರು.ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜ್ರುಮಾರು ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುತ್ತೂರು ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಪ್ರ.ಶಿಕ್ಷಣ ಪ್ರಕೋಷ್ಠದ ಚಂದ್ರಶೇಖರ ಬಪ್ಪಳಿಗೆ, ನೆಟ್ಟಣಿಗೆ ಮೂಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ,ಮಂಡಲದ ಪದಾಧಿಕಾರಿಗಳು, ಶಕ್ತಿ ಕೇಂದ್ರದ ಪ್ರಮುಖರು, ಗ್ರಾಮ ಪಂಚಾಯತ್ ಚುನಾವಣಾ ಪ್ರಭಾರಿಗಳು, ನರಿಮೊಗ್ರು, ಪಾಣಾಜೆ ಮತ್ತು ನೆಟ್ಟಣಿಗೆ ಮೂಡ್ನೂರು ಪಂಚಾಯತ್ ಗಳ, ಅಧ್ಯಕ್ಷರು , ಉಪಾಧ್ಯಕ್ಷರು ಮತ್ತು ಸದಸ್ಯರು , ಕಾರ್ಯಕರ್ತಯರು ಉಪಸ್ಥಿತರಿದ್ದರು.
ಮಹಿಳಾ ಮೋರ್ಚಾದ, ಉಷಾ ನಾರಾಯಣ ಕುಂಬ್ರ ಪ್ರಾರ್ಥಿಸಿದರು.ಮಂಡಲದ ಉಪಾಧ್ಯಕ್ಷ ಯತೀಂದ್ರ ಕೊಚ್ಚಿ ಸ್ವಾಗತಿಸಿ, ನೆಟ್ಟಣಿಗೆ ಮೂಡ್ನೂರು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಲೋಕೇಶ್ ಚಾಕೋಟೆ ವಂದಿಸಿದರು.ತಿಲಕ್ ರೈ ಕುತ್ಯಾಡಿ ಕಾರ್ಯಕ್ರಮ ನಿರೂಪಿಸಿದರು.