ಪಡುಮಲೆ ಪುದ್ವಾರ್ ಮೆಚ್ಚಿ ನೇಮ

0

ಬಡಗನ್ನೂರು:  ಪಡುಮಲೆ  ಶ್ರೀ ಪೂಮಾಣಿ ಕಿನ್ನಿಮಾಣಿ, ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನ ಬದಿನಾರು ಪಡುಮಲೆಯಲ್ಲಿ ಪೂರ್ವಶಿಷ್ಟಾ ಸಂಪ್ರದಾಯದಂತೆ ವರ್ಷಂಪ್ರತಿ ನಡೆಯುವ ಶ್ರೀ ಪಿಲಿಚಾಮುಂಡಿ ( ಶ್ರೀ ರಾಜನ್ ದೈವ ) ದೈವದ ಪುದ್ವಾರ್ ಮೆಚ್ಚಿ ನೇಮವು ಅ.17  ತುಲಾ ಸಂಕ್ರಮಣದ ಶುಭ ಸಂದರ್ಭದಲ್ಲಿ  ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಅ.17 ರಂದು ಬೆಳಗ್ಗೆ  ಗಣಪತಿ ಹೋಮ, ಬಳಿಕ ಶ್ರೀ ಪೂಮಾಣಿ ಕಿನ್ನಿಮಾಣಿ ಹಾಗೂ ರಾಜನ್ ದೈವಗಳಿಗೆ ಹಾಗೂ ಗುಳಿಗರಾಜನಿಗೆ  ತಂಬಿಲ ಸೇವೆ ನಡೆಯಿತು.

ಮಧ್ಯಾಹ್ನ   ರಾಜನ್ ದೈವದ ಪುದ್ವಾರ್ ಮೆಚ್ಚಿ ನೇಮ ನಡೆದು ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನ ಪ್ರಸಾದ ವಿತರಣಾ ನಡೆಯಿತು. ಕಾರ್ಯಕ್ರಮದಲ್ಲಿ  ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್, ಪೂಮಾಣಿ ಕಿನ್ನಿಮಾಣಿ ಹಾಗೂ ರಾಜನ್ ದೈವಗಳ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ರವಿರಾಜ ರೈ ಅಣಿಲೆ, ಸಮಿತಿ  ಸದಸ್ಯರಾದ  ರವಿರಾಜ ರೈ ಸಜಂಕಾಡಿ, ದಯಾ ವಿ.ರೈ ಬೆಳ್ಳಿಪ್ಪಾಡಿ, ಶ್ರೀಧರ ಎನ್ ನೇರ್ಲಪ್ಪಾಡಿ,ವಿಶ್ವನಾಥ ಪೂಜಾರಿ ಪುಜಾರಿಮುಲೆ, ಪ್ರಮುಖರರಾದ ತಿಲೋತ್ತಮಾ ರೈ , ಜಯಂತ ರೈ ಕುದ್ಕಾಡಿ,  ಕೃಷ್ಣ ರೈ ಕುದ್ಕಾಡಿ  ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸಂಜೀವ ರೈ ಕೆಳಗಿನ ಪೇರಾಲು,  ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು,  ಸಾರ್ವಜನಿಕ  ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ  ಜನಾರ್ದನ ಪೂಜಾರಿ ಪದಡ್ಕ  ಮತ್ತು  ರಾಮಣ್ಣ ಗೌಡ  ಕರ್ಪುಡಿಕಾನ, ಹಾಗೂ ಊರಾ ಪರವೂರ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here