ಬಿ.ಕೆ. ಹರಿಪ್ರಸಾದ್ ಹೆಸರಿನಲ್ಲಿ ಅಗರಿ ನವೀನ್ ಭಂಡಾರಿಯವರಿಗೆ 50 ಸಾವಿರ ರೂಪಾಯಿ ಆನ್ಲೈನ್ ವಂಚನೆ ಆರೋಪ

0

ಪುತ್ತೂರು: ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರ ಹೆಸರು ಹಾಗೂ ಫೋಟೊವನ್ನು ಫೇಸ್ಬುಕ್ ನಲ್ಲಿ ಬಳಸಿ, ಸಂತೋಷ್ ಕುಮಾರ್ ಎಂಬ ವ್ಯಕ್ತಿ, ನನ್ನನ್ನು ಮೋಸಗೊಳಿಸಿ, 50 ಸಾವಿರ ರೂಪಾಯಿ ವಂಚಿಸಿದ್ದಾನೆ ಎಂದು ಆರ್.ಬಿ.ಐ.ನ ಮಾಜಿ ನಿರ್ದೇಶಕರಾಗಿರುವ ಪುತ್ತೂರಿನ ಅಗರಿ ನವೀನ್ ಭಂಡಾರಿಯವರು ಬೆಂಗಳೂರು ಮೈಕೋ ಲೇ ಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಗರಿ ನವೀನ್ ಭಂಡಾರಿಯವರು ಬೆಂಗಳೂರು ಮೈಕೋ ಪೊಲೀಸ್ ಠಾಣೆಗೆ ನೀಡಿರುವ ದೂರಿನ ವಿವರ ಹೀಗಿದೆ:
ಅಕ್ಟೋಬರ್ 15, 2024ರಂದು ಸಂತೋಷ್ ಕುಮಾರ್ ಎಂಬ ವ್ಯಕ್ತಿ, ಬಿ.ಕೆ. ಹರಿಪ್ರಸಾದ್ ಅವರ ಹೆಸರು ಮತ್ತು ಫೋಟೋ ಬಳಸಿಕೊಂಡು ಫೇಸ್ಬುಕ್ ಮೂಲಕ ಮೋಸದ ಕರೆಯನ್ನು ಮಾಡಿ, ಆ ಕರೆಯಲ್ಲಿ, ಬಿ ಕೆ ಹರಿಪ್ರಸಾದ್ ಅವರು, ಈ ವ್ಯಕ್ತಿ (ಸಂತೋಷ್ ಕುಮಾರ್) ಯಲಹಂಕದಿಂದ ದೆಹಲಿಗೆ ವರ್ಗಾವಣೆಗೊಂಡಿರುವುದರಿಂದ ಈತನ ಸಾಮಾಗ್ರಿಗಳನ್ನು ಶಿಫ್ಟ್ ಮಾಡಲು ಅನುಕೂಲವಾಗುವಂತೆ ಆತನಿಗೆ (ಸಂತೋಷ್ ಕುಮಾರ್) ಸಹಾಯ ಮಾಡುವಂತೆ ಮನವಿ ಮಾಡಿಕೊಳ್ಳುವ ರೀತಿಯಲ್ಲಿ ವಂಚಕ ಸಂತೋಷ್ ಹರಿಪ್ರಸಾದ್ ಅವರ ಹೆಸರಿನಲ್ಲಿ ನವೀನ್ ಭಂಡಾರಿ ಅವರಿಗೆ ನಕಲಿ ಕರೆ ಮಾಡಿರುತ್ತಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆರೋಪಿ ವಂಚಕನ ಮಾತನ್ನು ನಿಜವೆಂದು ನಂಬಿದ ನವೀನ್ ಭಂಡಾರಿಯವರು ಎರಡು ಸಲ ತಲಾ 25 ಸಾವಿರ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಬಳಿಕ ಭದ್ರತಾ ತಪಾಸಣಾ ಗೇಟ್ ನಲ್ಲಿ ಸಾಮಾಗ್ರಿಗಳನ್ನು ಹೊರ ಸಾಗಿಸಲು 41 ಸಾವಿರ ರೂಪಾಯಿಗಳನ್ನು ವರ್ಗಾಯಿಸುವಂತೆಯೂ ವಂಚಕ ಸಂತೋಷ್ ಕೇಳಿಕೊಂಡಿದ್ದು, ಈ 41 ಸಾವಿರ ರೂಪಾಯಿಗಳು ರಿಫಂಡ್ ಅಗುತ್ತದೆ ಎಂದೂ ಆತ ನವೀನ್ ಅವರನ್ನು ನಂಬಿಸಿರುತ್ತಾನೆ.

ಬಳಿಕ ವಂಚಕನ ವರ್ತನೆಯಿಂದ ಸಂಶಯಗೊಂಡ ನವೀನ್ ಭಂಡಾರಿಯವರು ತಕ್ಷಣವೇ ಬಿ ಕೆ ಹರಿಪ್ರಸಾದ್ ಅವರಿಗೆ ಕರೆ ಮಾಡಿ ಮಾತನಾಡಿದ ಸಂದರ್ಭದಲ್ಲಿ ಅವರಿಗೆ ಇದೊಂದು ವಂಚಕ ಕರೆ ಎಂದು ಮನವರಿಕೆಯಾಗಿದೆ.

ಈ ನಡುವೆ ನವೀನ್ ಭಂಡಾರಿಯವರು ಒಟ್ಟು 50 ಸಾವಿರ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದು, ಅದರಲ್ಲಿ ₹25,000 ಅನ್ನು GPay ಮೂಲಕ ಅ.15 ರಂದು ಬೆಳಿಗ್ಗೆ 10:44ಕ್ಕೆ Transaction ID: 428998491987 ಮೂಲಕ ಕಳುಹಿಸಿದೆ. ಉಳಿದ ₹25,000ನ್ನು PhonePe ಮೂಲಕ 15-10-2024 ರಂದು 12:10ಕ್ಕೆ Transaction ID: 72410151210093328391430 ಮೂಲಕ ವರ್ಗಾಯಿಸಲಾಗಿದೆ ಎಂದು ಅಗರಿ ನವೀನ್ ಭಂಡಾರಿಯವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here