ಪುತ್ತೂರು: ಒಂದು ಸಮುದಾಯದ ಯುವತಿಯರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿರುವ ಸಂಜೀವ ಪೂಜಾರಿಯವರನ್ನು ಸಂಜೆಯೊಳಗೆ ಬಂಧಿಸುವುದಾಗಿ ಡಿವೈ ಎಸ್ ಪಿ ಅರುಣ್ ನಾಗೇಗೌಡ ಭರವಸೆ ನೀಡಿದ ಹಿನ್ನಲೆಯಲ್ಲಿ ಹಿಂಜಾವೇ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಡಿವೈಎಸ್ಪಿ, ಆರೋಪಿ ಸಂಜೀವ ಪೂಜಾರಿಯವರನ್ನು ಸಂಜೆಯೊಳಗೆ ಬಂಧಿಸುವುದಾಗಿ ಹೇಳಿದ್ದರೂ, ಆರೋಪಿ ಮನೆಯಲ್ಲಿದ್ದರೂ ಬಂಧಿಸದ ಪೊಲೀಸರಿಗೆ ದಿಕ್ಕಾರ ಕೂಗಿದ ಪ್ರತಿಭಟನಾಕಾರರು ಆರೋಪಿ ಸಂಜೀವ ಪೂಜಾರಿಯನ್ನು ಪೊಲೀಸರು ರಕ್ಷಣೆ ಮಾಡುತ್ತಿರುವುದಾಗಿ ಆರೋಪಿಸಿ ಭಜನೆ ಮಾಡುವ ಮೂಲಕ ಪ್ರತಿಭಟನೆ ಮುಂದುವರಿಸಿದ್ದರು. ಸದ್ಯ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.
Home ಇತ್ತೀಚಿನ ಸುದ್ದಿಗಳು ಡಿವೈಎಸ್ಪಿ ಭರವಸೆ: ಸಂಜೀವ ಪೂಜಾರಿ ವಿರುದ್ದ ಹಿಂಜಾವೇ ನಡೆಸುತ್ತಿದ್ದ ಪ್ರತಿಭಟನೆ ತಾತ್ಕಾಲಿಕ ಅಂತ್ಯ