ಕೆಯ್ಯೂರು: ಕೆಯ್ಯೂರು ಗ್ರಾಮದ ಕಣಿಯಾರು ನಿವಾಸಿ ಪ್ರಸಿದ್ಧ ಆಂಜನೇಯ ಸ್ವಾಮಿಯ ದೈವ ನರ್ತಕ ಶೀನ ಅಜಿಲ ಕಣಿಯಾರು (84) ಅಸೌಖ್ಯದಿಂದ ನ.22ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.
ಇವರು ಕೆಯ್ಯೂರು ಗ್ರಾಮದ ಇಳಾಂತಜೆಯಲ್ಲಿ ಸುಮಾರು 15 ವರ್ಷಗಳಿಂದ ಮತ್ತು ಸುಳ್ಯ ತಾಲೂಕಿನ ಶ್ರೀ ಪ್ರಸನ್ನಾಂಜನೇಯ ಶ್ರೀ ಕ್ಷೇತ್ರ ಅಡ್ಕಾರ್ 10 ವರ್ಷಗಳಿಂದ ಶ್ರೀ ಆಂಜನೇಯ ಸ್ವಾಮಿಯ ದೈವ ನರ್ತಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಿರಿ ಚಾವಡಿ ತಮ್ಮನ ಪುರಸ್ಕಾರ, ತುಳುವೆರಾ ಕೂಟ ಪುತ್ತೂರು, ಮತ್ತು ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಮತ್ತು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಮೃತರು ಪುತ್ರ ಕಿಟ್ಟ ಅಜಿಲ ಕಣಿಯಾರು, ಪುತ್ರಿ ಲೀಲಾವತಿ, ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.