ಪುತ್ತೂರು:’ಉತ್ತಮ ಸೇವೆಯೊಂದಿಗೆ ನಮ್ಮೊಂದಿಗೆ ಬೆಳೆಯಿರಿ’ ಎಂಬ ಧ್ಯೇಯವಾಕ್ಯದೊಂದಿಗೆ ಇಲ್ಲಿನ ಎಪಿಎಂಸಿ ರಸ್ತೆಯ ಜೆಎಂಜೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ 2025ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಛೇರಿಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಲಿಯೋ ಡಿ’ಸೋಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜ, ಸಿಬ್ಬಂದಿಗಳಾದ ವಾಲ್ಟರ್ ಆರೋನ್ ಡಿ’ಸೋಜ, ಪ್ರೇಮ್ ರೋಶಲ್ ಡಿ’ಸೋಜ, ಪವನ್ ಕುಮಾರ್, ವಿಲ್ಮಾ ಪ್ರಿಯಾಂಕ ಡಿ’ಸೋಜ ಹಾಗೂ ನಿರ್ವಿ ಸಂಸ್ಥೆಯ ಪ್ರಜ್ವಲ್ ಕುಮಾರ್, ಅಭಿಷೇಕ್ ಹಾಜರಿದ್ದರು.