ʼಚೌಟರ ತೋಟʼದೊಳಗೆ ದೇರ್ಲ ಅವರ ಕೈಚಳಕ

0

ತೋಟ, ತೋಟದಲ್ಲಿ ನಾನಾ ರೀತಿಯ ಆವಿಷ್ಕಾರದ ಗಿಡಗಳು ಭತ್ತ, ಅಡಿಕೆ, ತೆಂಗು, ಬಾಳೆ, ಮೆಣಸು, ಕೃಷಿಯೊಂದಿಗೆ ರಂಬುಟಾನ್‌, ಅವಕಡೊ, ಮ್ಯಾಂಗೋಸ್ಟಿನ್‌, ಡ್ರ್ಯಾಗನ್‌ ಫ್ರೂಟ್‌ ಇನ್ನೂ ಇತ್ಯಾದಿ.. ಇತ್ಯಾದಿ…ಇದರ ಜೊತೆಗೆ ಕೂಡು ಕುಟುಂಬದ ಅನೋನ್ಯ ಸಂಬಂಧಗಳ ಒಳತಿರುವಿನ ಮಾಹಿತಿಯನ್ನು ಸಾರುವ ಪುಸ್ತಕ ‘ಚೌಟರ ತೋಟ’. ಕನ್ನಡ- ತುಳು ಭಾಷೆಯ ಪ್ರಮುಖ ಲೇಖಕ ನಾಟಕಕಾರ ದಿ. ಡಿ.ಕೆ ಚೌಟರ ಸಹೋದರ ಡಾ. ಚಂದ್ರಶೇಖರ್ ಚೌಟರ ತೋಟದ ಮತ್ತು ಅವರ ಕೂಡು ಕುಟುಂಬದ ಸ್ವಾರಸ್ಯಕತೆಯನ್ನು ಅಕ್ಷರ ರೂಪದಲ್ಲಿ ಕಟ್ಟಿ ಕೊಟ್ಟವರು ದಕ್ಷಿಣ ಕನ್ನಡ ಜಿಲ್ಲೆಯ ಉಪನ್ಯಾಸಕ,ಪತ್ರಕರ್ತ, ಲೇಖಕ ಡಾ. ನರೇಂದ್ರ ರೈ ದೇರ್ಲ.

ಚೌಟರ ತೋಟ‘ ಕರ್ನಾಟಕ ಕೃಷಿ ಕಥನ ಮಾಲಿಕೆಯಲ್ಲಿ ಎರಡನೆಯ ಪುಸ್ತಕ .ಕೃಷಿಕ, ಲೇಖಕ ಡಾ. ನರೇಂದ್ರ ರೈ ದೇರ್ಲ ಅವರು ರಾಜ್ಯದ ಆಯ್ದ ಕೃಷಿಕರ ತೋಟಕ್ಕೆ ಹೋಗಿ ತಾವೇ ಅಗೆದು ಬಗೆದು ಸಂದರ್ಶಿಸಿ ಬರೆದ ಈ ಪುಸ್ತಕದಲ್ಲಿ ಕೇರಳ ಕರ್ನಾಟಕ ಗಡಿಭಾಗದ ಮಿಯ ಪದವಿನ ಕನ್ನಡ- ತುಳು ಭಾಷೆಯ ಪ್ರಮುಖ ಲೇಖಕ ನಾಟಕಕಾರ ದಿ. ಡಿ.ಕೆ ಚೌಟರ ಸಹೋದರ ಡಾ. ಚಂದ್ರಶೇಖರ್ ಚೌಡರ ತೋಟ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಕೃಷಿ ಖುಷಿಯ ಪುಸ್ತಕ.

ಡಾ. ಚಂದ್ರಶೇಖರ್ ಚೌಟರ ತೋಟದಲ್ಲಿರುವ ಬೆಳೆಯ ಕುರಿತು ಹಾಗೂ ಸಹೋದರರೆಲ್ಲ ಒಂದೇ ಮನೆಯಲ್ಲಿದ್ದುಕೊಂಡು ಅವರು ಬಂದ ಆದಾಯವನ್ನು ಹಂಚುವ ಸಂಗತಿ. ಕರಾವಳಿ ಭಾಗದಲ್ಲಿ ಎಳೆನೀರನ್ನು ಸುಮಾರು 30 ವರ್ಷಗಳ ಹಿಂದೆಯೇ ರಸ್ತೆ ಬದಿಯಲ್ಲಿಟ್ಟು ಮಾರುಕಟ್ಟೆ ಕಂಡುಕೊಂಡು ಎಳನೀರು ಚೌಟರೆಂದೇ ಪ್ರಖ್ಯಾತಗೊಂಡು ರಾಜ್ಯದಾದ್ಯಂತ ವಿಸ್ತರಿಸಿದ ಮಾಹಿತಿಯ ಕುರಿತು, ಮನೆಯಲ್ಲಿರುವವರ ಸದಸ್ಯರ ಕುರಿತು ಲೇಖಕರು ಓದುಗರಿಗೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

ಲೇಖಕರು: ನರೇಂದ್ರ ರೈ ದೇರ್ಲ

2022ರಲ್ಲಿ ಕನಸು ಪ್ರಕಾಶನದ ಅಡಿಯಲ್ಲಿ 200ರ ಒಳಗಿನ ಮೊತ್ತವನ್ನು ಸರಿದೂಗಿಸಿಕೊಂಡು ಕೃಷಿಕರಿಗೆ, ಕೃಷಿ ಆಶಕ್ತ, ಸಂಶೋಧಕರಿಗೆ ತೆರೆದಿಟ್ಟ ಪುಸ್ತಕ ಇದಾಗಿದ್ದು,ನಿಸ್ಸಂಶಯವಾಗಿಯೂ ಕೃಷಿ ಆಸಕ್ತಿ ಇರುವವರು ಕೃಷಿಯಲ್ಲಿ ಪ್ರಯೋಗ ಮಾಡ ಬಯಸುವವರು ಕೊಂಡು ಓದಲೇ ಬೇಕಾದ ಪುಸ್ತಕ .

ಬರಹ: ಅಕ್ಷಯ್‌ ಕುಮಾರ್‌ ಎ

LEAVE A REPLY

Please enter your comment!
Please enter your name here