ಪುತ್ತೂರು: ನರೇಂದ್ರ ಪ.ಪೂ.ಕಾಲೇಜಿನ ನೂತನ ಸಭಾಂಗಣ ಹಂಸಧ್ವನಿ ಇದರ ಉದ್ಘಾಟನೆ ಮತ್ತು ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ ʼಪ್ರತಿಭಾ ಪರ್ವ 2024ʼ ಕಾರ‍್ಯಕ್ರಮ ಡಿ.15 ರಂದು ತೆಂಕಿಲದ ನರೇಂದ್ರ ಪ.ಪೂ. ಕಾಲೇಜಿನಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭದ ಡಿ.15ರಂದು ಸಂಜೆ 4ರಿಂದ ನಡೆಯಲಿದ್ದು, ನೂತನ ಸಭಾಂಗಣದ ಉದ್ಘಾಟನೆಯನ್ನು ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ‍್ಯದರ್ಶಿಗಳಾದ ಡಾ.ಕೆ.ಎಮ್ ಕೃಷ್ಣ ಭಟ್ ಇವರು ನಡೆಸಿಕೊಡಲಿದ್ದಾರೆ.
ಸಾಂಸ್ಕೃತಿಕ ಕಾರ‍್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಚಲನಚಿತ್ರ ನಟಿ ಭವ್ಯಶ್ರೀ ಪೂಜಾರಿ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಕುಂಜೆ ಗ್ರೂಪ್ ಆಫ್ ಕಂಪನೀಸ್ ಇದರ ನಿರ್ದೇಶಕರಾದ ಮಿಥುನ್ ಭಟ್ ಕಾಕುಂಜೆ ಇವರು ಭಾಗವಹಿಸಲಿದ್ದಾರೆ. ದ.15ರಂದು ಅಪರಾಹ್ನ 2.45 ರಿಂದ ವಿದ್ಯಾರ್ಥಿ ಸಾಧಕರಿಗೆ ಅಭಿನಂದನಾ ಸಮಾರಂಭ ಮತ್ತು ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕವಾಗಿ, ಸಾಂಸ್ಕೃತಿಕ, ಕ್ರೀಡೆ ಮತ್ತು ಇನ್ನಿತರ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ‍್ಯಕ್ರಮ ಪ್ರತಿಭಾ ಪುರಸ್ಕಾರ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ನರೇಂದ್ರ ಪ.ಪೂ. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಉಮೇಶ್ ನಾಯಕ್ ಇವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಆಶಾ ಬೆಳ್ಳಾರೆ ಇವರು ಭಾಗವಹಿಸಲಿದ್ದಾರೆ. ನರೇಂದ್ರ ಪ.ಪೂ. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯ, ಸಂಚಾಲಕರಾದ ಸಂತೋಷ ಬಿ., ಸದಸ್ಯರಾದ ಮೋಹಿನಿ ದಿವಾಕರ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ದೀಪಾ ನಾಯಕ್, ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ತೀರ್ಥರಾಜ್ ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಸೃಜನ್ ಕೆ.ಪಿ., ಆಶಿಕಾ ರಾವ್, ಹರ್ಷಿತಾ ಕೆ. ಉಪಸ್ಥಿತಿ ಇರಲಿದ್ದಾರೆ. ಸಭಾ ಕಾರ‍್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.