ಪುತ್ತೂರು ಸರಕಾರಿ ಹಾಸ್ಪಿಟಲ್ ನಲ್ಲಿ ಆಡಳಿತ ವೈದಾಧಿಕಾರಿಗಳಾದ ಡಾ. ಆಶಾಜ್ಯೋತಿ ರವರ ಅಧ್ಯಕ್ಷತೆಯಲ್ಲಿ ಪುತ್ತೂರು ತಾಲೂಕು ವಿಕಲ ಚೇತನರ ನೋಡೆಲ್ ಅಧಿಕಾರಿ ವಾಣಿಶ್ರೀ ಹಾಗೂ ತಾಲೂಕು ಆರೋಗ್ಯಾಧಿಕಾರಿ ದೀಪಕ್ ರೈ ರವರ ಮಾರ್ಗದರ್ಶನದಲ್ಲಿ ಪುತ್ತೂರು ತಾಲೂಕು ಮಟ್ಟದ ಬಹುಮಟ್ಟದ ಪುನರ್ ವಸತಿ ಕಾರ್ಯಕರ್ತರಾದ ನವೀನ್ ಕುಮಾರ್ ರವರ ಉಪಸ್ಥಿತಿಯಲ್ಲಿ ವಿಕಲ ಚೇತನರ ಯು ಡಿ. ಐಡಿ ಪ್ರಮಾಣ ಪತ್ರ ಶಿಬಿರ ಡಿ.13 ರಂದು ನಡೆಯಿತು.
ಪುತ್ತೂರು ಸರಕಾರಿ ಆಸ್ಪತ್ರೆಯ ಎಲುಬು ಕೀಲು ತಜ್ಞರಾದ ಡಾಕ್ಟರ್ ಅಜಯ್ ಎಂ.ಬಿ, ಪುತ್ತೂರು ಸರಕಾರಿ ಆಸ್ಪತ್ರೆಯ ಹಿರಿಯ ತಜ್ಞರಾದ ಫಿಸಿಷಿಯನ್ ಡಾ. ಯದುರಾಜ್ ಡಿ.ಕೆ, , ಕಿವಿ ಮೂಗು ಗಂಟಲು ತಜ್ಞರಾದ ದಕ್ಷಿಣ ಕನ್ನಡ ಜಿಲ್ಲೆಯ ಆಡಿಯೋಲಿಸ್ಟ್ ಸುಶಾಂತ್, ಡಾ. ಜೈನಾಬ್ ಸುನು ಆಲಿ ,ಮಕ್ಕಳ ತಜ್ಞರಾದ ಡಾ. ಪ್ರಶಾಂತ್ ವಿಕಲಚೇತನರ ಪ್ರಮಾಣ ಪತ್ರ ಶಿಬಿರ ತಪಾಸಣೆ ನಡೆಸಿಕೊಟ್ಟರು.
ದಕ್ಷಿಣ ಕನ್ನಡ ಜಿಲ್ಲಾ ವಿಕಲ ಚೇತನರ ಪುನರ್ ವಸತಿ ಕೇಂದ್ರದ ಮಾಜಿ ನೋಡೇಲ್ ಅಧಿಕಾರಿ ಸುಬ್ರಮಣಿ ಪಿ.ವಿ, ಪುತ್ತೂರು ತಾಲೂಕು ಹಾಗೂ ಕಡಬ ತಾಲೂಕಿನ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು ಹಾಜರಿದ್ದರು.