ಪುತ್ತೂರು: ಕೋಡಿಂಬಾಡಿ-ಮಠಂತಬೆಟ್ಟು ಅಂಗನವಾಡಿ ಕೇಂದ್ರಕ್ಕೆ 2024-25 ನೇ ಸಾಲಿನ ತಾ.ಪಂ ನ ಅನಿರ್ಬಂದಿತ ಅನುದಾನ ರೂ.5 ಲಕ್ಷ ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯ ರೂ.8.5 ಲಕ್ಷ ಸೇರಿದಂತೆ ಒಟ್ಟು ರೂ.13.5 ಲಕ್ಷ ಅನುದಾನದಲ್ಲಿ ನೂತನ ಕಟ್ಟಡದಕ್ಕೆ ಡಿ.15ರಂದು ಶಿಲಾನ್ಯಾಸ ನೆರವೇರಿತು.
ಅಂಗನವಾಡಿ ಕೇಂದ್ರದ ಸ್ಥಳದಾನಿಗಳು, ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ನಾಗೇಶ ಶರ್ಮಾ ಮಠದಬೆಟ್ಟು ಮತ್ತು ಕೋಡಿಂಬಾಡಿ ಗ್ರಾಮ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಕೃಷ್ಣ ಭಟ್ ರವರು ಪ್ರಾರ್ಥನೆ ಸಲ್ಲಿಸಿ, ತೆಂಗಿನಕಾಯಿ ಒಡೆದು ಶಿಲಾನ್ಯಾಸ ನೆರವೇರಿಸಿದರು.
ನಂತರ ನಡೆದ ಅಂಗನವಾಡಿ ಕೇಂದ್ರದ ಬಾಲಮೇಳ ಮತ್ತು ಸ್ತ್ರೀಶಕ್ತಿ ಸಂಘದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ನೆರವೇರಿತು. ಅಂಗನವಾಡಿ ಪುಟಾಣಿಗಳೊಂದಿಗೆ ಅತಿಥಿಗಳು ಸೇರಿಕೊಂಡು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಗೀತಾ ಬಾಬು ಮೊಗೇರ ಅಧ್ಯಕ್ಷತೆ ವಹಿಸಿದ್ದರು. ಗೆಜ್ಜೆರಿಗಿ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಉಲ್ಲಾಸ್ ಕೋಟ್ಯಾನ್,ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಪುತ್ತೂರು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರಾದ ನಿರಂಜನ ರೈ ಮಠಂತಬೆಟ್ಟು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಹರಿಣಾಕ್ಷಿ, ಕೋಡಿಂಬಾಡಿ ಗ್ರಾ. ಪಂ ಸದಸ್ಯರುಗಳಾದ ಜಗನ್ನಾಥ ಶೆಟ್ಟಿ ನಡುಮನೆ, ರಾಮಚಂದ್ರ ಪೂಜಾರಿ ಶಾಂತಿನಗರ,ವಿಶ್ವನಾಥ ಕೃಷ್ಣಗಿರಿ, ರಾಮಣ್ಣ ಗೌಡ ಗುಂಡೋಳೆ, ಪಂಚಾಯತ್ ನ ಮಾಜಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಕಟ್ಟಡದ ಗುತ್ತಿಗೆದಾರ ವಿಜಯ ಕುಮಾರ್ ಪೂಜಾರಿ ಚೀಮುಳ್ಳು, ಅಂಗನವಾಡಿ ಕಾರ್ಯಕರ್ತೆ ಜಯಂತಿ ಡಿ.ಗೌಡ ಪಿಲಿಗುಂಡ, ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಪುಷ್ಪಲತಾ.ವಿ.ನಾಯಕ್ ಮೋನಡ್ಕ, ಪತ್ತೂರು ಬ್ಲಾಕ್ ಸೊಸೈಟಿನ ಸದಸ್ಯೆ ಪದ್ಮಲತಾ.ಜೆ.ಶೆಟ್ಟಿ ನಡುಮನೆ ಮೊದಲಾದವರು ಉಪಸ್ಥಿತರಿದ್ದರು. ಬಾಲಮೇಳ ಪ್ರಯುಕ್ತ ಅಂಗನವಾಡಿ ಮಕ್ಕಳು, ಮಕ್ಕಳ ಪೋಷಕರು ಮತ್ತು ಸ್ತ್ರೀಶಕ್ತಿ ಸಂಘದ ಸದಸ್ಯರುಗಳಿಗೆ ನಡೆಸಲಾದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕರುಣಾಕರ ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು ಮತ್ತು ಸಾಕ್ಷಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಜಯಂತಿ ಡಿ.ಗೌಡ ಬಹುಮಾನ ವಿಜೇತರುಗಳ ಪಟ್ಟಿಯನ್ನು ವಾಚಿಸಿದರು. ಸೌಮ್ಯ ಜಗದೀಶ್ ಆಚಾರ್ಯ ಮೋನಡ್ಕ ವಂದಿಸಿದರು. ಅಂಗನವಾಡಿ ಸಹಾಯಕಿ ಪ್ರೇಮಲತಾ ಶೆಟ್ಟಿ ದೇಂತಾರು ಸಹಕರಿಸಿದರು.
ಬಾಲವಿಕಾಸ ಸಮಿತಿಯ ಸದಸ್ಯರುಗಳು, ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಸೇರಿದಂತೆ ಹಲವು ಮಂದಿ ಹಾಗೂ ಉಪಸ್ಥಿತರಿದ್ದರು.