ಬಡಗನ್ನೂರು: ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ 2024-25 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದ.21ರಂದು ವಿದ್ಯಾಸಂಸ್ಥೆಗಳ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 9.30ರಿಂದ ಸರ್ವೋದಯ ವಿದ್ಯಾನಿಧಿ ಸಂಗ್ರಹಕರು ಕೊಡುಗೆಯಾಗಿ ನೀಡಿರುವ ಧ್ವನಿವರ್ಧಕ ಹಾಗೂ ಕೈ ತೊಳೆಯುವ ಸ್ಟೀಲ್ ಬೇಸಿನ್, 1998-99ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿರುವ ನೀರಿನ ಟ್ಯಾಂಕ್, 2004-05 ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿರುವ ಬೆಂಚ್ ಮತ್ತು ಟೇಬಲ್ ಹಾಗೂ ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಎನ್ ಕೊಡುಗೆಯಾಗಿ ನೀಡಿರುವ ಡೀಸೆಲ್ ಜನರೇಟರ್ ಇವುಗಳ ಉದ್ಘಾಟನಾ ಸಮಾರಂಭ ನಡೆಯಲಿದೆ.
ಪ್ರತಿಭಾ ಪುರಸ್ಕಾರ
ಸಂಜೆ ಗಂಟೆ 6-00 ರಿಂದ 10-30ರ ವರೆಗೆ ”ಸರ್ವೋದಯ ಹೆಜ್ಜೆ ಗೆಜ್ಜೆ ನಾದ’ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು.
ಸಭಾ ಕಾರ್ಯಕ್ರಮ
ರಾತ್ರಿ ಗಂಟೆ 8.00 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಭಾ ಕಾರ್ಯಕ್ರಮವು ಸುಳ್ಯಪದವು ಸರ್ವೋದಯ ವಿದ್ಯಾವರ್ಧಕ ಸಂಘ ಅಧ್ಯಕ್ಷರಾದ ಶಿವರಾಮ ಹೆಚ್.ಡಿ. ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅತಿಥಿಗಳಾಗಿ ಮಂಗಳೂರು, ವಕೀಲರಾದ ಬಾಲರಾಜ್ ರೈ, ಪಾಪೆಮಜಲು ಹಾಲು ಉತ್ಪಾದಕರ ಸೇವಾ ಸಹಕಾರಿ ಸಂಘ ಅಧ್ಯಕ್ಷರಾದ ವಿನಯ ಕಜಮೂಲೆ ಭಾಗವಹಿಸಲಿದ್ದಾರೆ.
ಅಭಿನಂದನಾ ಕಾರ್ಯಕ್ರಮ;-
ಬೆಂಗಳೂರು, ಲೆಕ್ಕ ಪರಿಶೋಧಕರು ಹಾಗೂ ಹಿರಿಯ ವಿದ್ಯಾರ್ಥಿ ಆಗಿರುವ ರಾಜೇಶ್ ರೈ, ಆಗ್ನಿಪಥ್ ಸೇನೆಗೆ ಆಯ್ಕೆಯಾದ ಅಭಿಷೇಕ್ ನಾಯಕ್ ಮೇಗಿನಮನೆ, ಹಾಗೂ 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತು ತಾಲೂಕು ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ವಿದ್ಯಾಸಂಸ್ಥೆ ವಿವಿಧ ಕೊಡುಗೆ ನೀಡಿರುವ ದಾನಿಗಳಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಣಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.