ಪುತ್ತೂರು: ಮಾಡ್ನೂರು ಗ್ರಾಮದ ಕೊಟ್ಟಿ ಕೃಷ್ಣಪ್ರಸಾದ್ ಎಂಬವರ ತೋಟಕ್ಕೆ ಡಿ.19ರಂದು ರಾತ್ರಿ ಕಾಡಾನೆ ಲಗ್ಗೆ ಇಟ್ಟು ಕೃಷಿ ನಾಶ ಮಾಡಿದೆ ಎಂದು ತಿಳಿದು ಬಂದಿದೆ.
3ತಿಂಗಳಿನಿಂದ ಕಾಡಾನೆಯಿಂದ ಉಪಟಳ- ರೈತರ ಆಕ್ರೋಶ
ಕಳೆದ ಮೂರು ತಿಂಗಳಿನಿಂದ ಕಾಡಾನೆ 35 ಬಾರಿಗಿಂತ ಅಧಿಕವಾಗಿ ಮಾಡ್ನೂರು ಗ್ರಾಮ ಸೇರಿದಂತೆ ಇನ್ನೂ ಅನೇಕ ಪ್ರದೇಶಗಳಿಗೆ ನುಗ್ಗಿ ಕೃಷಿ ನಾಶ ಮಾಡಿದ್ದು, ರೈತರು ಆಕ್ರೋಶಗೊಂಡಿದ್ದಾರೆ. ಈ ಕುರಿತಾಗಿ ತಕ್ಷಣವೇ ಶಾಸಕರ ಗಮನಕ್ಕೆ ತರಲಾಗುವುದು ಮತ್ತು ಜಿಲ್ಲಾಧಿಕಾರಿಯವರಿಗೂ ಮನವಿ ಮಾಡಲಾಗುತ್ತದೆ. ಅಲ್ಲಿಂದ ಯಾವುದೇ ಸ್ಪಂದನೆ ಬಾರದಿದ್ದಲ್ಲಿ ರೈತರೆಲ್ಲ ಸೇರಿ ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.