ಪುತ್ತೂರು: ಪುತ್ತೂರಿನ ಬೆದ್ರಾಳ ಕೊರಚಿಮಜಲು ಎಲಿಕಾದ ನವೀಕೃತ ಆರೂಢ ಮತ್ತು ದೈವಸ್ಥಾನದಲ್ಲಿ ಶ್ರೀ ನಾಗ ಮತ್ತು ಶ್ರೀ ರಕ್ತೇಶ್ವರಿ ಸಪರಿವಾರ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಡಿ.22 ಮತ್ತು 23 ರಂದು ನಡೆಯಲಿದೆ.
ಬ್ರಹ್ಮ ಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿ ಮತ್ತು ವೇದಮೂರ್ತಿ ಕೆಮ್ಮಿಂಜೆ ವೆಂಕಟಮೂರ್ತಿ ಕಲ್ಲೂರಾಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಡಿ.22ರಂದು ಸಾಮೂಹಿಕ ಪ್ರಾರ್ಥನೆ, ವಿಶ್ವಕರ್ಮ ಪ್ರಾರ್ಥನೆ, ವಾಸ್ತು ಪೂಜೆ, ಬಲಿ, ದುರ್ಗಾನಮಸ್ಕಾರ ಪೂಜೆ, ಬಿಂಬಶುದ್ದಿ, ಮೃತ್ತಿಕಾಧಿವಾಸ, ಜಲಾಧಿವಾಸ, ಧ್ಯಾನಾಧಿವಾಸ, ಮಹಾಪೂಜೆ, ಶೈಯಾಧಿವಾಸ ನಡೆಯಲಿದ್ದು, ಡಿ.23ರಂದು ಮಹಾಗಣಪತಿ ಹವನ, ಪ್ರಾಯಶ್ಚಿತ ಹೋಮ, ಪ್ರತಿಷ್ಠಾ ಪ್ರಾಧಾನ ಹೋಮ, ಬ್ರಹ್ಮ ಕಲಶ ಪ್ರತಿಷ್ಠೆ ನಡೆಯಲಿದೆ. ಅಲ್ಲದೆ ನಾಗ ಮತ್ತು ರಕ್ತೇಶ್ವರಿ ಸಪರಿವಾರ ಧರ್ಮ ದೈವಗಳ ಪುನಃ ಪ್ರತಿಷ್ಠೆ, ಪ್ರತಿಷ್ಠಾಕಲಶಾಭಿಶೇಕ, ನಿರ್ಣಯ ಪ್ರಾರ್ಥನೆ, ಪಂಚಾಮೃತಾಭಿಶೇಕ, ಸರ್ವ ಪ್ರಾಯಶ್ಚಿತ ಆಶ್ಲೇಷ ಬಲಿ, ಬ್ರಹ್ಮಕಲಶಾಭಿಶೇಕ,ಮಹಾಪೂಜೆ ನಡೆಯಲಿದೆ. ಶ್ರೀ ನಾಗ ರಕ್ತೇಶ್ವರಿ ಸೇವಾ ಪ್ರತಿಷ್ಠಾನದ ವತಿಯಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು, ಗ್ರಾಮಸ್ಥರು ಭಾಗವಹಿಸುವಂತೆ ಸಂಸ್ಥೆಯ ಸಂಚಾಲಕರು ಆಡಳಿತ ಮಂಡಳಿ ಸದಸ್ಯರು ಮನವಿ ಮಾಡಿದ್ದಾರೆ.