ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪಂಜಿಗುಡ್ಡೆ ಈಶ್ವರ ಭಟ್ ಅವರ ನೇತೃತ್ವದಲ್ಲಿ ನೂತನವಾಗಿ ವ್ಯವಸ್ಥಾಪನಾ ಸಮಿತಿ ಕಾರ್ಯರಂಭಗೊಂಡಿದೆ. ಭಕ್ತರಿಗೆ ಬೆಳಗ್ಗಿನ ಧನುಪೂಜೆ, ನಿತ್ಯ ಪೂಜಾ ವೀಕ್ಷಣೆಗೆ ಬೃಹತ್ ಎಲ್‌ಇಡಿ ಟಿವಿಯನ್ನು ಸಮಿತಿ ಸದಸ್ಯರು ಕೊಡುಗೆಯಾಗಿ ತಮ್ಮ ಪ್ರಥಮ ಸೇವೆಯನ್ನು ನೀಡಿದ್ದಾರೆ.
ಈ ಹಿಂದೆ ದೇವಳದಲ್ಲಿ ಶ್ರೀ ದೇವರ ಪೂಜಾ ಸಂದರ್ಭ ಭಕ್ತರಿಗೆ ಸುಲಭವಾಗಿ ವೀಕ್ಷಣೆ ಮಾಡಲು ಸಣ್ಣ ಟಿವಿ ಅಳವಡಿಸಲಾಗಿತ್ತು. ಇದೀಗ ಅದಕ್ಕಿಂದ ನಾಲ್ಕು ಪಟ್ಟು ದೊಡ್ಡದಾದ ಸುಮಾರು ರೂ.1ಲಕ್ಷ ಮೌಲ್ಯದ ಬೃಹತ್ ಎಲ್‌ಇಡಿ ಟಿ.ವಿಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮತ್ತು ಸಮಿತಿ ಸದಸ್ಯರು ಸೇರಿಕೊಂಡು ದೇವಳಕ್ಕೆ ಅರ್ಪಣೆ ಮಾಡಿದ್ದಾರೆ.
ಡಿ.20 ರಂದು ಬೆಳಿಗ್ಗೆ ಅದರ ಉದ್ಘಾಟನೆಯನ್ನು ಮಾಡಲಾಗಿದೆ. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಳಿನಿ ಪಿ ಶೆಟ್ಟಿ, ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ವಿನಯ್ ಕುಮಾರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ದಿನೇಶ್ ಪಿ.ವಿ, ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಈ ಸಂದರ್ಭ ಉಪಸ್ಥಿತರಿದ್ದರು.