ಫೆ.7ರಂದು ಪಡುಮಲೆಯಲ್ಲಿ ಸಾರ್ವಜನಿಕ ಚಂಡಿಕಾ ಹವನ ಮತ್ತು ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ- ಆಮಂತ್ರಣ ಪತ್ರಿಕೆ ಬಿಡುಗಡೆ

0

ಬಡಗನ್ನೂರುಃ  ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ ಸೇವಾ ಸಮಿತಿ ಪಡುಮಲೆ ಇದರ ವತಿಯಿಂದ ಸಾರ್ವಜನಿಕ ಚಂಡಿಕಾ ಹವನ ಮತ್ತು ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ ಸೇವೆ ಫೆ.7ರಂದು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆಯಲಿದೆ. ಇದರ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದ.22ರಂದು ನಡೆಯಿತು.

ಆಮಂತ್ರಣ ಪತ್ರಿಕೆಯನ್ನು ದೇವರ ಗರ್ಭಗುಡಿಯಲ್ಲಿಟ್ಟು ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ಶ್ರೀ ದೇವರಿಗೆ  ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕಟೀಲು ಯಕ್ಷಗಾನ ಮೇಳದ ಯಕ್ಷಗಾನ ಬಯಲಾಟ ಸೇವಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ಪಡುಮಲೆ, ದೇವಸ್ಥಾನ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ, ಕೋಶಾಧಿಕಾರಿ ರಾಜೇಶ್ ರೈ ಮೇಗಿನಮನೆ,ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು, ಬಯಲಾಟ ಸಮಿತಿ ಸದಸ್ಯರುಗಳಾದ ಪುರಂದರ ರೈ ಕುದ್ಕಾಡಿ, ಶ್ರೀನಿವಾಸ್ ಗೌಡ ಕನ್ನಯ,  ಕೃಷ್ಣಪ್ರಸಾದ್ ರೈ ಪಡುಮಲೆ, ರಾಮಕೃಷ್ಣ ಭಟ್ ಚಂದುಕೂಡ್ಲು, ಸುರೇಶ್ ರೈ ಪಳ್ಳತ್ತಾರು, ಪುರಂದರ ರೈ ಸೇನರಮಜಲು, ಸಂಜೀವ ಸಾಲಿಯಾನ್ ಅಣಿಲೆ, ಪುಷ್ಪರಾಜ ಅಳ್ವ ಗಿರಿಮನೆ, ಶಿವಕುಮಾರ್ ಮೋಡಿಕೆ, ಶಶಿಧರ ಪಟ್ಟೆ, ಪಕೀರ ಮೈಂದನಡ್ಕ, ಹರಿಶ್ಚಂದ್ರ ಸಜಂಕಾಡಿ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here