ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

0

3.10 ಕೋಟಿ ರೂ . ವ್ಯವಹಾರ : 3.77 ಲಕ್ಷ ರೂ. ಲಾಭ
ಶೇ. 15 ಡಿವಿಡೆಂಡ್, ಪ್ರತಿ ಲೀ. ಹಾಲಿಗೆ 87 ಪೈಸೆ ಬೋನಸ್ ಘೋಷಣೆ

ಪುತ್ತೂರು: ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸೆ. 17 ರಂದು ಕುರಿಯ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ರೈ ಕುರಿಯ ಏಳ್ನಾಡುಗುತ್ತುರವರು ಮಾತನಾಡಿ, ಸಂಘವು 2024-25ನೇ ಸಾಲಿನಲ್ಲಿ 3ಕೋಟಿ 10 ಲಕ್ಷ 22 ಸಾವಿರ ರೂ ವ್ಯವಹಾರ ನಡೆಸಿ, 3 ಲಕ್ಷ 77 ಸಾವಿರ ರೂ ಲಾಭಗಳಿಸಿದ್ದು, ಸದಸ್ಯರಿಗೆ 15 ಶೇಕಡಾ ಡಿವಿಡೆಂಡ್ ಮತ್ತು ಪ್ರತಿ ಲೀಟರ್ ಹಾಲಿಗೆ 87 ಪೈಸೆ ಬೋನಸ್ ನೀಡಲಾಗುವುದು ಎಂದು ಹೇಳಿದರು.

ಸಂಘದ ಸಾಧನೆ ಒಳ್ಳೆಯ ಪ್ರಗತಿಯಲ್ಲಿ ಇದೆ- ಎಸ್.ಬಿ. ಜಯರಾಮ್ ರೈ
ದ.ಕ.ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್. ಜಯರಾಮ್ ರೈಯವರು ಮಾತನಾಡಿ ಜಿಲ್ಲಾ ಹಾಲು ಒಕ್ಕೂಟದಲ್ಲಿ ಪ್ರತಿದಿನ 3.92ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ರಾಜ್ಯದ 3 ಹಾಲು ಒಕ್ಕೂಟಗಳಲ್ಲಿ ಗುಣಮಟ್ಟದ ಹಾಲು ಪೂರೈಕೆಯಲ್ಲಿ ದ.ಕ, ಜಿಲ್ಲಾ ಹಾಲು ಒಕ್ಕೂಟಕ್ಕೆ ಸ್ಥಾನ ಇದೆ. ಕುರಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಧನೆ ಒಳ್ಳೆಯ ಪ್ರಗತಿಯಲ್ಲಿ ಇದೆ. ಈ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ರೈ ಕುರಿಯ ಏಳ್ನಾಡುಗುತ್ತು ನೇತೃತ್ರದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲಿ ಎಂದರು.

ಕರ್ತವ್ಯ ನಿರ್ವಹಿಸುತ್ತಿದ್ದೇವೆ- ಚಂದ್ರಶೇಖರ್ ರಾವ್
ದ.ಕ.ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಚಂದ್ರಶೇಖರ್ ರಾವ್ ನಿಧಿಮುಂಡರವರು ಮಾತನಾಡಿ ಒಕ್ಕೂಟದಿಂದ ದೊರೆಯುವ ಎಲ್ಲಾಸೌಲಭ್ಯಗಳನ್ನು ನಾವು ಪ್ರಾಮಾಣಿಕವಾಗಿ ಹಾಲು ಉತ್ಪಾದಕರ ಸಂಘಗಳಿಗೆ ತಲುಪಿಸುವಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಎಸ್.ಬಿ.ಜಯರಾಮ್ ರೈ, ಚಂದ್ರಶೇಖರ್ ನಿಧಿಮುಂಡರವರಿಗೆ ಸನ್ಮಾನ
ದ.ಕ.ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಎಸ್.ಬಿ.ಜಯರಾಮ್ ರೈ, ಚಂದ್ರಶೇಖರ್ ನಿಧಿಮುಂಡರವರಿಗೆ ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಗೌರವಿಸಿ, ಸನ್ಮಾನ ಮಾಡಲಾಯಿತು.

ಹಾಲು ಉತ್ಪಾದನೆ ಜಾಸ್ತಿ ಮಾಡಬೇಕು-ಡಾ. ಸತೀಶ್ ರಾವ್
ದ,ಕ, ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್ ರವರು ಮಾತನಾಡಿ ಹೈನುಗಾರರು ಹಾಲು ಉತ್ಪಾದನೆಯತ್ತ ಹೆಚ್ಚು ಗಮನಹರಿಸಬೇಕು, ಈರೋಡ್‌ನಿಂದ ಹಸುಗಳನ್ನು ತಂದು ಇಲ್ಲಿ ಹಾಲು ಉತ್ಪಾದನೆ ಜಾಸ್ತಿ ಮಾಡಬೇಕು. ಈರೋಡ್‌ಭಾಗದ ಹಸುಗಳು ಇಲ್ಲಿನ ಹೈನುಗಾರಿಕೆಗೆ ಪೂರಕವಾಗಿದೆ ಎಂದು ಹೇಳಿದರು. ಹೈನುಗಾರರು ನಮ್ಮ ನಂದಿನಿ ಪಶು ಆಹಾರವನ್ನೇ ಬಳಕೆ ಮಾಡಿದಾಗ ಸಂಘಕ್ಕೆ ಲಾಭ ಬರುತ್ತದೆ, ಜೊತೆಗೆ ರೈತರಿಗೆ ಬೋನಸ್ ಹೆಚ್ಚು ಸಿಗುತ್ತದೆ ಎಂದು ಹೇಳಿದರು.

ಹೈನುಗಾರರಿಗೆ ಹೆಚ್ಚು ಲಾಭ ಇದೆ- ಶ್ರೀದೇವಿ:
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಡಾ. ಶ್ರೀದೇವಿರವರು ಮಾತನಾಡಿ ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಈ ಭಾಗದ ಹೈನುಗಾರರು ಇನ್ನೂ ಹೆಚ್ಚಿನ ಮುತುವರ್ಜಿಯಿಂದ ಸಂಘಕ್ಕೆ ಹೆಚ್ಚಿನ ಹಾಲು ಪೂರೈಕೆ ಮಾಡಬೇಕು ಎಂದು ಹೇಳಿದರು. ಸಂಘದ ಸದಸ್ಯರುಗಳಾದ ಕೃಷ್ಣಪ್ರಸಾದ್ ಕೆದಿಲಾಯ, ಪಾರಸ್ಕ್ ಡಿಸೋಜ, ಗೋಪಾಲ ಕರಜ್ಜರವರು ವಿವಿಧ ಸಲಹೆ ಸೂಚನೆಯನ್ನು ನೀಡಿದರು.
ಸಂಘದ ಮಾಜಿ ಕಾರ್‍ಯದರ್ಶಿ ದೇರಣ್ಣ ಗೌಡ, ಮಾಜಿ ಅಧ್ಯಕ್ಷ ವೆಂಕಟ್ರಮಣ ನಕ್ಷತ್ರಿತ್ತಾಯ ಕೈಂತಿಲ, ಮಂಜುನಾಥ ಶೇಖ ಶಿಬಿರ ಸಹಿತ ನೂರಾರು ಮಂದು ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದರು.

ಪ್ರತಿಭಾ ಪುರಸ್ಕಾರ:
ಸಂಘದ ವತಿಯಿಂದ ವಿದ್ಯಾರ್ಥಿಗಳಾದ ಪ್ರಥ್ವಿ ನೈತಾಡಿ ಗಾಗೂ ಗಗನ್ ಕುರಿಯ ಅವರಿಗೆ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ಉಪಾಧ್ಯಕ್ಷ ಚಿದಾನಂದ ಶೆಟ್ಟಿ ಮಾಣಿಜಾಲು, ನಿರ್ದೇಶಕರುಗಳಾದ ಗಣೇಶ್ ಶೆಟ್ಟಿ ಶಿಬರ, ಗಣೇಶ್ ಬಂಗೇರ ಕೊರುಂಗು,ಶಿವಶಂಕರ್ ಭಟ್ ಡೆಮ್ಮಾಲೆ, ಚಂದ್ರಹಾಸ್ ರೈ ಡಿಂಬ್ರಿ, ದಿನೇಶ್ ಕರ್ಕೇರ ಕೋಲಾಡಿ, ವೆಂಕಟ್ರಮಣ ಮಾಪಾಲ ಆನಂದ್ ಕುಮಾರ್ ಉಳ್ಳಾಲ, ಜಯಲಕ್ಷ್ಮಿ ಆರ್ ರೈ ಬೂಡಿಯಾರ್, ರಮ್ಯ ಪಡ್ಪುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ನಿರ್ದೆಶಕ ಗಣೇಶ್ ಬಂಗೇರ ಕೊರಂಗು ಸ್ವಾಗತಿಸಿ, ನಿರ್ದೇಶಕಿ ರಮ್ಯ ಪಡ್ಪು ಪ್ರಾರ್ಥನೆಗೈದರು. ಸಂಘದ ಕಾರ್‍ಯದರ್ಶಿ ರಜನಿ ರಾಜೇಶ್ ವರದಿ ವಾಚಿಸಿ, ನಿರ್ದೇಶಕ ಗಣೇಶ್ ಶೆಟ್ಟಿ ಶಿಬರ ಕಾರ್‍ಯಕ್ರಮ ನಿರೂಪಿಸಿ, ವಂದಿಸಿದರು. ಸಂಘದ ಸದಸ್ಯರುಗಳಾದ ರವರು ಸಲಹೆ ಸೂಚನೆಯನ್ನು ನೀಡಿದರು. ಸಂಘದ ಶಾಖಾ ಸಿಬ್ಬಂದಿ ಜೈನುಲ್ ಅಬಿದ್ ನೈತ್ತಾಡಿ, ಹಾಲು ಪರೀಕ್ಷಕಿ ಪ್ರತಿಮಾ ಡಿಂಬ್ರಿರವರು ಸಹಕರಿಸಿದರು

ಸಂಘಕ್ಕೆ ಹೆಚ್ಚಿನ ಹಾಲು ಪೂರೈಕೆ ಮಾಡಿ
ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘವು ಎಲ್ಲಾ ಹೈನುಗಾರರು ಮತ್ತು ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸಹಕಾರದಲ್ಲಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಹಾಲು ಒಕ್ಕೂಟದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಹೈನುಗಾರರಿಗೆ ತಲುಪಿಸುವ ಕೆಲಸ ಮಾಡುತ್ತೇವೆ.
ವಿನೋದ್‌ಕುಮಾರ್ ರೈ ಕುರಿಯ ಏಳ್ನಾಡುಗುತ್ತು ,
ಅಧ್ಯಕ್ಷರು ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘ
ಅತೀ ಹೆಚ್ಚು ಹಾಲು ಪೂರೈಕೆ ಮಾಡಿದವರು:

ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದವರು
ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದವರಲ್ಲಿ ಪ್ರಥಮ: ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಚಿದಾನಂದ ಶೆಟ್ಟಿ ಮಾಣಿಜಾಲು, ದ್ವಿತೀಯ : ಬಿಜು, ತೃತೀಯ : ಪದ್ಮಾವತಿರವರನ್ನು ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here