ಪುತ್ತೂರು: ಡಿ.27ರಂದು ನಿಧನರಾದ ನಾಟಿವೈದ್ಯೆ, ಕಾವು ಕೆರೆಮಾರು ನಿವಾಸಿ ದಿ|ಚೆನ್ನಮ್ಮ ಅವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಸಭೆಯು ಜ.9ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಕಾವು ಹೇಮನಾಥ ಶೆಟ್ಟಿ ಅವರು ನುಡಿನಮನ ಸಲ್ಲಿಸಿದರು. ಒಡಿಯೂರು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ, ನಿರ್ದೇಶಕ ಜಯಪ್ರಕಾಶ್ ರೈ ನೂಜಿಬೈಲು, ಈಶ್ವರಮಂಗಲ ಶಾಖೆ ಮೇನೇಜರ್ ಸುಜಾತ, ಉಪ್ಪಿನಂಗಡಿ ಶಾಖೆ ಮೇನೇಜರ್ ಕಮಲ, ಒಡಿಯೂರುಶ್ರೀ ಗ್ರಾಮ ವಿಕಾಸ ಯೋಜನೆ ಯೋಜನಾಧಿಕಾರಿ ಮಾಂತೇಶ್ ಭಂಡಾರಿ, ವಲಯ ಸಂಯೋಜಕಿ ಮಹಿತಾ, ಮೇಲ್ವಿಚಾರಕಿ ಸವಿತಾ, ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ, ಕೋಶಾಧಿಕಾರಿ ಮಹೇಶ್ಚಂದ್ರ ಸಾಲ್ಯಾನ್, ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಮುಖರಾದ ಡೆಂಬಾಳೆ ಜಗನ್ನಾಥ ರೈ, ಕೇಶವ ಸಂಪ್ಯ ಮೇರ್ಲ, ವಿಶ್ವನಾಥ ಪೂಜಾರಿ ಕೆಂಗುಡೇಲು, ಆನಂದ ಪೂಜಾರಿ ಸುಳ್ಯ ಹಾಗೂ ಮೃತರ ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಹಿತೈಷಿಗಳು ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೌನ ಪ್ರಾರ್ಥನೆ ಮಾಡಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.