ಉಪ್ಪಿನಂಗಡಿ: ಇಲ್ಲಿನ ಹಿರಿಯ ಉದ್ಯಮಿ ಕೆ. ಮೋಹನ್ ದಾಸ್ ಕಿಣಿ (75) ಹೃದಯಾಘಾತಕ್ಕೀಡಾಗಿ ಶನಿವಾರ ರಾತ್ರಿ ನಿಧನರಾದರು.
ಸಾಮಾಜಿಕ ಕಳಕಳಿಯೊಂದಿಗೆ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದ ಇವರು ಪುಸ್ತಕ ಪ್ರೇಮಿಯಾಗಿ ಗಮನ ಸೆಳೆದಿದ್ದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.