ಗಣಿತ ಒಲಿಂಪಿಯಾಡ್ ಪರೀಕ್ಷೆ- ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ

0

ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ ರವರು ನಡೆಸಿರುವ ಗಣಿತ ಒಲಿಂಪಿಯಾಡ್ ಪರೀಕ್ಷೆಯಲ್ಲಿ 1ನೇ ತರಗತಿಯ ವಿದ್ಯಾರ್ಥಿಗಳಾದ ಸುಕೀರ್ತಿ ಎಸ್.ಪಿ ( ಸುಧೇoದ್ರ ಎ.ಪಿ ಮತ್ತು ಕೀರ್ತನಾ ಬಿ. ದಂಪತಿ ಪುತ್ರಿ ) ಪ್ರಥಮ ಸ್ಥಾನವನ್ನು ಪಡೆದಿದ್ದು, ಚಿನ್ನದ ಪದಕ ಮತ್ತು ಅತ್ಯುತ್ತಮ ಪ್ರದರ್ಶನದ ಪ್ರಮಾಣಪತ್ರ ಹಾಗೂ ರೂ.1000/- ಗಿಫ್ಟ್ ವೋಚರ್ ಪಡೆದಿದ್ದಾರೆ. ಜಯಾoಶ್ ವಿ. ( ಮುರಳಿ ದಾಮೋದರ ಮತ್ತು ಮಾನಸ ವಿ. ದಂಪತಿ ಪುತ್ರ ) ದ್ವಿತೀಯ ಸ್ಥಾನವನ್ನು ಪಡೆದಿದ್ದು, ಬೆಳ್ಳಿ ಪದಕ ಹಾಗೂ ರೂ.1000/- ಗಿಫ್ಟ್ ವೋಚರ್ ಪಡೆದಿದ್ದಾರೆ.


ಇವರಿಗೆ ಡಾ.ನಿವೇದಿತಾ ವಿ. ರಾಮಕುಂಜ ಇವರು ತರಬೇತಿಯನ್ನು ನೀಡಿರುತ್ತಾರೆ ಹಾಗೂ ಈ ಪರೀಕ್ಷೆಯ ಮೇಲ್ವಿಚಾರಣೆಯನ್ನು ಶಾಲಾ ಪ್ರಾಥಮಿಕ ವಿಭಾಗದ ಸಂಯೋಜಕಿ ಶ್ರೀದೇವಿ ಕೆ. ಹೆಗ್ಡೆಯವರು ಮಾಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here