ಇಂದಿನ ಕಾರ್ಯಕ್ರಮ (17/01/2025)

0

  • ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕಿನ ಕಛೇರಿಯಲ್ಲಿ ಬೆಳಿಗ್ಗೆ ೧೧ರಿಂದ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಯ ನಾಮಪತ್ರ ಸಲ್ಲಿಕೆ
  • ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ ೧೦ರಿಂದ ಪುತ್ತೂರು ತಾಲೂಕಿನ ಉದ್ಯೋಗದಾತರಿಗೆ, ಗುತ್ತಿಗೆದಾರರಿಗೆ, ಸಂಘಟಿತ, ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ, ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ತಾಲೂಕು ಮಟ್ಟದ ಕಾರ್ಯಾಗಾರ
  • ವಿಟ್ಲ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಅಪರಾಹ್ನ ೩.೩೦ರಿಂದ ಆಯವ್ಯಯ ತಯಾರಿಕೆ ಪೂರ್ವಭಾವಿ ಸಭೆ
  • ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ೧೦ಕ್ಕೆ ವಿಶೇಷ ಸಾಮಾನ್ಯ ಸಭೆ
  • ಬೆಟ್ಟಂಪಾಡಿ ಗ್ರಾ.ಪಂ ಕಛೇರಿಯ ಸಭಾಂಗಣದಲ್ಲಿ ಬೆಳಿಗ್ಗೆ ೯ಕ್ಕೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರದ ಉದ್ಘಾಟನೆ
  • ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿಯಲ್ಲಿ ಅಪರಾಹ್ನ ೨ರಿಂದ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಯ ನಾಮಪತ್ರ ಸಲ್ಲಿಕೆ
  • ಕೊಂಡಾಡಿಕೊಪ್ಪ ಅಂಗನವಾಡಿ ಕೇಂದ್ರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಆಲಂಕಾರು ೧ನೇ ವಾರ್ಡ್, ಶರವೂರು ಅಂಗನವಾಡಿಯಲ್ಲಿ ೧೧.೩೦ಕ್ಕೆ ಆಲಂಕಾರು ೨ನೇ ವಾರ್ಡ್, ಬುಡೇರಿಯಾ ಅಂಗನವಾಡಿಯಲ್ಲಿ ಅಪರಾಹ್ನ ೨.೩೦ಕ್ಕೆ ಆಲಂಕಾರು ೪ನೇ ವಾರ್ಡ್, ಆಲಂಕಾರು ಗ್ರಾ.ಪಂ ಸಭಾಂಗಣದಲ್ಲಿ ಸಂಜೆ ೪ಕ್ಕೆ ಆಲಂಕಾರು ೩ನೇ ವಾರ್ಡ್‌ನ ವಾರ್ಡುಸಭೆ
  • ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಂಜೆ ೭ರಿಂದ ನಿತ್ಯೋತ್ಸವ, ನೃತ್ಯ ವೈಭವ, ನೃತ್ಯ ರೂಪಕ, ರಾತ್ರಿ ೯ರಿಂದ ಕಥೆ ಬರೆದಾತಿಜಿ-ತುಳು ನಾಟಕ
  • ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ ೮.೩೦ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ ೧೨ಕ್ಕೆ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಸಂಜೆ ೫ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಪೇಟೆ ಸವಾರಿ, ಮಹಾಪೂಜೆ, ಶ್ರೀ ಭೂತ ಬಲಿ
  • ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಇರ್ವೆರ್ ಉಳ್ಳಾಕುಲ ಕ್ಷೇತ್ರ ಅಮರ ಕಾಸ್ಪಾಡಿಯಿಂದ ದೇವಸ್ಥಾನಕ್ಕೆ ದೈವಗಳ ಭಂಡಾರ ಬರುವುದು, ೧೧ಕ್ಕೆ ಧ್ವಜಾರೋಹಣ, ದೇವರ ಬಲಿ, ಮಹಾಪೂಜೆ, ಸಂಜೆ ೬ರಿಂದ ಭಜನೆ, ರಾತ್ರಿ ೭ರಿಂದ ನಿತ್ಯ ಬಲಿ, ವಸಂತಕಟ್ಟೆ ಪೂಜೆ, ಪೇಟೆ ಸವಾರಿ
  • ಕೆದಿಲ ಗ್ರಾಮದ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಬೆಳಿಗ್ಗೆ ೯.೩೦ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ೧೧ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಕೆದಿಲದಿಂದ ಮಹಾದೈವಗಳ ಭಂಡಾರ ಆಗಮನ, ದೇವರ ಭೇಟಿ, ಸಂಜೆ ೫.೩೦ರಿಂದ ಭಕ್ತಿ ರಸಮಂಜರಿ, ರಾತ್ರಿ ೭ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ಉಯ್ಯಾಲೋತ್ಸವ
  • ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ (ಉಳ್ಳಾಕುಲು), ವ್ಯಾಘ್ರ ಚಾಮುಂಡಿ (ರಾಜನ್ ದೈವ) ದೈವಸ್ಥಾನದಲ್ಲಿ ಬೆಳಿಗ್ಗೆ ೧೧ರಿಂದ ಪೂಮಾಣಿ ದೈವದ ನೇಮ, ಅನ್ನಸಂತರ್ಪಣೆ, ರಾತ್ರಿ ೮ರಿಂದ ಪಾಲಕ್ಕಿ ಉತ್ಸವ, ಬೀರ ತಂಬಿಲ
  • ಪಡ್ನೂರು ದೇಂತಡ್ಕ ಶ್ರೀ ವನಶಾಸ್ತಾರ ದೇವಸ್ಥಾನದಲ್ಲಿ ಬೆಳಿಗ್ಗೆ ೭ರಿಂದ ಗಣಪತಿ ಹವನ, ಭಜನಾ ಸೇವೆ, ಏಕಾದಶ ರುದ್ರಾಭಿಷೇಕ, ನವಕ ಕಲಶ, ನಾಗತಂಬಿಲ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೫ರಿಂದ ಸಾರ್ವಜನಿಕ ದುರ್ಗಾಪೂಜೆ, ಸಾರ್ವಜನಿಕ ಆಶ್ಲೇಷ ಬಲಿ, ದೈವಗಳ ತಂಬಿಲ, ರಂಗಪೂಜೆ, ರಾತ್ರಿ ೭ರಿಂದ ನೃತ್ಯ ಭಜನೆ, ೯ರಿಂದ ಏಕಾದಶಿ ದೇವಿ ಮಹಾತ್ಮೆ-ಯಕ್ಷಗಾನ ಬಯಲಾಟ
  • ಕೋಲ್ಪೆ ದೇವಸ್ಥಾನದಲ್ಲಿ ರಾತ್ರಿ ಮಾರಿಪೂಜೆ
  • ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ೧೮ನೇ ವರ್ಷದ ನಗರ ಭಜನೆ ಪ್ರಯುಕ್ತ ಕೃಷ್ಣಗಿರಿ, ತಾಡಮನೆ, ದರ್ಖಾಸುವಿನಲ್ಲಿ ಬೈಲುವಾರು ಭಜನೆ
  • ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ಸಂಜೆ ೫ಕ್ಕೆ ರಾಜ್ಯ ಸರಕಾರದ ಯುವ ಸಬಲೀಕರಣ, ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ, ದ.ಕ., ಉಡುಪಿ ಜಿಲ್ಲಾಡಳಿತಗಳ ಸಹಭಾಗಿತ್ವದಲ್ಲಿ ಕರ್ನಾಟಕ ಕ್ರೀಡಾಕೂಟ ಉದ್ಘಾಟನೆ


ಶುಭವಿವಾಹ
ಬಂಟವಾಳದ ಬಂಟರ ಭವನದ ಡಾ| ಆರ್. ಎನ್. ಶೆಟ್ಟಿ ಸಭಾಭವನದಲ್ಲಿ ಪುತ್ತೂರು ಮುರ ದಿನೇಶ್ ಕುಲಾಲ್ ಪಿ. ವಿ. ಯವರ ಪುತ್ರಿ ಚೈತ್ರ ಡಿ. ಮತ್ತು ಜಯಪ್ರಕಾಶ್ ಮರೋಳಿಯವರ ಪುತ್ರ ಜಿತೇಶ್ ಪ್ರಜ್ವಲ್ ಎಂ. ರವರ ವಿವಾಹ

LEAVE A REPLY

Please enter your comment!
Please enter your name here