ಪುತ್ತೂರು: ಪರಿವಾರ ಬಂಟ ಸಮುದಾಯದ ನೆಟ್ಟಣಿಗೆ ಗ್ರಾಮದ ಬಜ ರೇಂಜಮೂಲೆಯಲ್ಲಿರುವ ಪುತ್ತಿಗೆ ತರವಾಡು ಶ್ರೀ ರಾಜ ರಾಜೇಶ್ವರಿ ದೇವಿ ಹಾಗೂ ಧೂಮಾವತಿ ಬಂಟ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ಜ 16 ರಿಂದ 18 ರವರೆಗೆ ನಡೆಯಿತು.
ಜ.16 ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವುದು,ಸಂಜೆ ತಂತ್ರಿಗಳಿಗೆ ಪೂರ್ಣಕುಂಬ ಸ್ವಾಗತ,ಸಾಂಸ್ಕ್ರತಿಕ ಕಾರ್ಯಕ್ರಮ, ರಾತ್ರಿ ದೇವತಾ ಪ್ರಾರ್ಥನೆ,ಆಚಾರ್ಯ ವರಣ,
,ಪುಣ್ಯಾಹವಾಚನ ,ಸುದರ್ಶನ ಹೋಮ ನಡೆದು ಇನ್ನಿತರ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಜ.17 ರಂದು ಬೆಳಿಗ್ಗೆ ಗಣಪತಿ ಹೋಮ,ತಿಲಹೋಮ,ಪವಮಾನ ಹೋಮ,ಚಕ್ರಾಬ್ಧ ಪೂಜೆ, ದ್ವಾದಶಿ ಮೂರ್ತಿ ಆರಾಧನೆ, ಶ್ರೀ ರಾಜ ರಾಜೇಶ್ವರಿ ದೇವಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ,ಮಹಾಪೂಜೆ,ನಾಗ ತಂಬಿಲ,ಪಾನಕ ಪೂಜೆ, ಅನ್ನಸಂತರ್ಪಣೆ,ಧಾರ್ಮಿಕ ಸಭೆ ನಡೆಯಿತು.ಸಂಜೆ ಗುಳಿಗ,ಕೊರತಿ,ಕಲ್ಲುರ್ಟಿ,ವರ್ಣರ ಪಂಜುರ್ಲಿ ದೈವಗಳ ನೆಮೋತ್ಸವ ನಡೆಯಿತು.ಜ.18 ರಂದು ಧರ್ಮದೈವ ಧೂಮಾವತಿ ಬಂಟ ನೇಮೋತ್ಸವ ನಡೆದು ಪ್ರಸಾದ ವಿತರಣೆ ನಡೆಯಿತು.