ಖಿದ್ಮಾ ಫೌಂಡೇಶನ್ ಅಧ್ಯಕ್ಷರಾಗಿ ಆಮಿರ್ ಅಶ್ಅರೀ ಬನ್ನೂರು ಆಯ್ಕೆ

0

ಪುತ್ತೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ ನೂತನ ಅಧ್ಯಕ್ಷರಾಗಿ ಯುವ ಕವಿ, ವಾಗ್ಮಿ ಆಮಿರ್ ಅಶ್ಅರೀ ಬನ್ನೂರು ಆಯ್ಕೆಯಾಗಿದ್ದಾರೆ.


ಕಳೆದ ಐದು ವರ್ಷಗಳಿಂದ ಸ್ನೇಹ, ಸೇವೆ, ಸಮಾನತೆ ಎಂಬ ಪ್ರಮೇಯದಡಿ ರಾಜ್ಯ ಮಟ್ಟದ ಸಾಹಿತ್ಯ ಕ್ಷೇತ್ರದಲ್ಲಿ ಖಿದ್ಮಾ ಫೌಂಡೇಶನ್ ಕರ್ನಾಟಕ ಕಾರ್ಯಾಚರಿಸುತ್ತಿದೆ.
ಈ ಹಿಂದೆ ಸಂಸ್ಥೆಯ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಸಂಸ್ಥೆಯ ಹಿರಿಯ ಮಾರ್ಗದರ್ಶಕರಾದ ರಾಘವೇಂದ್ರ ರಾವ್ ಹೈದರಾಬಾದ್, ಡಾ ಎಂ ಎಂ ಬಾಷಾ ಚಿಕ್ಕಬಳ್ಳಾಪುರ, ರಾಧಾಮಣಿ ಎಂ ಕೋಲಾರ ಹಾಗೂ ಮುಹಮ್ಮದ್ ಹುಮಾಯೂನ್ ಮೈಸೂರು ಮೊದಲಾವರು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here