ಕೆಯ್ಯೂರು: ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ, ಪ್ರಸಿದ್ಧ ದೈವನರ್ತಕ ಲಕ್ಷ್ಮಣ ಪರವ (63) ಅಲ್ಪಕಾಲದ ಅಸೌಖ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಜ.25 ರಂದು ನಿಧನರಾದರು.
ಮೃತರು ಸುಮಾರು 40 ವರ್ಷಗಳಿಂದ ಅನೇಕ ಸ್ಥಳಗಳಲ್ಲಿ ದೈವನರ್ತನ ಸೇವೆಯನ್ನು ಮಾಡಿದ್ದಾರೆ. ಇವರಿಗೆ ಪುತ್ತೂರು ತಾಲೂಕು ಘಟಕ ,ತುಳು ಸಾಹಿತ್ಯ ಸಮ್ಮೇಳನ, ಮತ್ತು ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಮತ್ತು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಮೃತರು ಪತ್ನಿ ಶೋಭಾ, ಪುತ್ರ ಪ್ರಜ್ವಲ್, ಪುತ್ರಿಯರಾದ ತುಳಸಿ, ಅಶ್ವಿನಿ, ಅನುಷಾ, ಅಳಿಯಂದಿರು ಮೊಮ್ಮಕ್ಕಳು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.