ನಾಳೆ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ವಿವೇಕಾನಂದ ಕಾಲೇಜಿನ ಎನ್‌.ಸಿ.ಸಿ ವಿದ್ಯಾರ್ಥಿಗಳು ಭಾಗಿ

0

ಪುತ್ತೂರು: ದೆಹಲಿಯ ಗಣರಾಜ್ಯೋತ್ಸವ ಪರೇಡ್ ನ ಪ್ರಯುಕ್ತ ಆಯೋಜಿಸಿದ ಸತತ ಏಳು ಕ್ಯಾಂಪಿನಲ್ಲಿ ಭಾಗವಹಿಸಿ ಯಶಸ್ವಿಗೊಂಡು ನಾಳೆ (ಜ.26) ದೆಹಲಿಯಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಪರೇಡಿನಲ್ಲಿ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ)ದ ಎನ್.ಸಿ.ಸಿ ಘಟಕದ ಮೂವರು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.


ಪ್ರಧಾನ ಮಂತ್ರಿ ರ್‍ಯಾಲಿಯಲ್ಲಿ ಗೊಳಿತಡಿ ನಿವಾಸಿಯಾದ ರುಕ್ಮಯ ಮತ್ತು ಗೀತಾ ಇವರ ಪುತ್ರ ದ್ವಿತೀಯ ಬಿಕಾಂ ವಿದ್ಯಾರ್ಥಿ JUO ಸುಜಿತ್, ಕರ್ತವ್ಯಪಥ್ ನಲ್ಲಿ ಬೊಂಡಾಲ ನಿವಾಸಿಯಾದ ಉದಯಕುಮಾರ್ ಮತ್ತು ವನಿತಾ ಇವರ ಪುತ್ರಿ ತೃತೀಯ ಬಿಸಿಎ ವಿದ್ಯಾರ್ಥಿನಿ JUO ಲಹರಿ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಸುಳ್ಯ ನಿವಾಸಿಯಾದ ರವಿಪ್ರಕಾಶ್ ಮತ್ತು ಜಯಶ್ರೀ ಆರ್ ಪ್ರಕಾಶ್ ಪುತ್ರಿ CPL ಶುಭದ ಆರ್ ಪ್ರಕಾಶ್ ಭಾಗವಹಿಸುತ್ತಿದ್ದಾರೆ.


ಇವರಿಗೆ ಎನ್‌ಸಿಸಿ ಘಟಕದ ಅಧಿಕಾರಿ ಲೆ.ಭಾಮಿ ಅತುಲ್ ಶೆಣೈ ತರಬೇತಿ ನೀಡಿರುತ್ತಾರೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಮತ್ತು ಎನ್‌ಸಿಸಿ ಘಟಕ, ಐಕ್ಯೂಎಸಿ ಘಟಕ, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದ ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.

LEAVE A REPLY

Please enter your comment!
Please enter your name here