ಪುತ್ತೂರು: ನಗರದ ಮುಖ್ಯರಸ್ತೆಯ ಧನ್ವಂತರಿ ಆಸ್ಪತ್ರೆ ಬಳಿಯ ಸಚಿನ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಮಂಜುನಾಥ್ ನಾಯಕ್ ಮಾಲಕತ್ವದ ಪ್ರತಿಷ್ಠಿತ ಚಿಲ್ಲರೆ ಮತ್ತು ರಖಂ ವ್ಯಾಪಾರ ಮಳಿಗೆ “ಸಚಿನ್ ಟ್ರೇಡಿಂಗ್” ಕಂಪೆನಿ ನಾಡಿನ ಜನತೆಗೆ ಮತ್ತು ಚಿಲ್ಲರೆ ವ್ಯಾಪಾರಸ್ಥರಿಗೆ 76ನೇ ಗಣರಾಜ್ಯೋತ್ಸವ ಪ್ರಯುಕ್ತ ಮನೆ ಬಳಕೆ ವಸ್ತುಗಳು ಮತ್ತು ದಿನ ಬಳಕೆಯ ದಿನಸಿ ಸಾಮಾಗ್ರಿಗಳ ಮೇಲೆ ವಿಶೇಷ ದರ ಪ್ರಕಟಿಸಿದೆ.
ವಿವಿಧ ಬ್ರ್ಯಾಂಡ್ ಸೋಪ್, ಪೌಡರ್, ಮೋಪ್, ಪೊರಕೆ, ಮೈದಾ ಹುಡಿ, ಗೋಧಿ ಹುಡಿ, ಪುಂಡಿ ಹುಡಿ, ಸೇವಿಗೆ ಹುಡಿ, ಸಕ್ಕರೆ, ಬೆಳ್ತಿಗೆ ಅಕ್ಕಿ, ಬಾಸ್ಮತಿ ಅಕ್ಕಿ, ಸೋನಾಮಸೂರಿ ಅಕ್ಕಿ, ಸ್ಟೀಮ್ ರೈಸ್, ಉದ್ದಿನ ಬೇಳೆ, ತೊಗರಿ ಬೇಳೆ, ಬಿಳಿ ಕಡ್ಲೆ, ಕೆಂಪು ಕಡ್ಲೆ, ಹೆಸರು, ಹೆಸರು ಬೇಳೆ , ಹಸಿರು ಬಟಾಣಿ, ಕಡ್ಲೆ ಹಿಟ್ಟು, ಉಪ್ಪು, ಗೋಧಿ, ಗೋದಿ ಬೂಸಾ, ಪಾಮೋಲಿನ್ ಎಣ್ಣೆ, ಕಡ್ಲೆ ಬೇಳೆ, ಎದುರು ಬೆಳ್ತಿಗೆ ಸೇರಿದಂತೆ ಇನ್ನಷ್ಟು ಹಲವಾರು ಮನೆ ಬಳಕೆ ಮತ್ತು ದಿನ ಬಳಕೆಯ ದಿನಸಿ ವಸ್ತುಗಳ ಮೇಲೆ ವಿಶೇಷ ದರ ಪ್ರಕಟಿಸಿದ್ದು, ಈಗಾಗಲೇ ಹಲವರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.
ಜ.31ರವರೆಗೆ ಈ ಕೊಡುಗೆ ಲಭ್ಯವಿದ್ದು, ನಾಡಿನ ಜನತೆ ಸೇರಿದಂತೆ ಚಿಲ್ಲರೆ ವ್ಯಾಪಾರಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಚಿನ್ ಟ್ರೇಡಿಂಗ್ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.