ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್‌ನಲ್ಲಿ ವಾರ್ಷಿಕೋತ್ಸವ ನಭಾ -2025

0

  • ಈ ವಿದ್ಯಾಸಂಸ್ಥೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವರದಾನ: ಜಯಂತ ನಡುಬೈಲು
  • ಇದೊಂದು ಮಾದರಿ ವಿದ್ಯಾ ಸಂಸ್ಥೆ: ಸಲೀಮ್ ಅಲ್ತಾಫ್
  • ವಿದ್ಯೆ – ಆರೋಗ್ಯ ಎರಡನ್ನೂ ಜನಪ್ರಿಯ ಸಮೂಹ ಸಂಸ್ಥೆಗಳು ನೀಡುತ್ತಿದೆ: ನಿತ್ಯಾನಂದ ನಾಯಕ್
  • ಪೋಷಕರು ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವುದು ಅತೀ ಅಗತ್ಯ: ಡಾ. ಕಿರಾಶ್ ಪರ್ತಿಪ್ಪಾಡಿ

ವಿಟ್ಲ: ಇದೊಂದು ಅಭೂತಪೂರ್ವ ವೈಭವದಿಂದ ಕೂಡಿದ ಕಾರ್ಯಕ್ರಮವಾಗಿದೆ. ಅತ್ಯಂತ ಪ್ರಶಾಂತವಾದ ವಾತಾವರಣದಲ್ಲಿ ದೇವಾಲಯದ ಸ್ವರೂಪದಲ್ಲಿ ವಿದ್ಯಾಸಂಸ್ಥೆಯ ನಿರ್ಮಾಣವಾಗಿದೆ. ವ್ಯವಸ್ಥೆಗಳು ಬಹಳಷ್ಟು ಅಚ್ಚುಕಟ್ಟಾಗಿದೆ. ಮುಂದಿನ ದಿನಗಳಲ್ಲಿ ಇದೊಂದು ಬಹುದೊಡ್ಡ ವಿದ್ಯಾಲಯ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮಕ್ಕಳಿಗೆ ವಿಧ್ಯೆಯ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಕೆಲಸವಾಗಬೇಕು. ಈ ವಿದ್ಯಾಸಂಸ್ಥೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವರದಾನವಾಗಿದೆ ಎಂದು ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಜಯಂತ ನಡುಬೈಲ್ ರವರು ಹೇಳಿದರು.

ಅವರು ಫೆ.1ರಂದು ಕಂಬಳಬೆಟ್ಟು ಜನಪ್ರೀಯ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ನಭಾ – 2025ನ್ನು ಉದ್ಘಾಟಿಸಿ ಮಾತನಾಡಿದರು.

ಬಿ.ಸಿ.ರೋಡ್ ನ ಡೈಮಂಡ್ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಸಲೀಮ್ ಅಲ್ತಾಫ್ ರವರು ಮಾತನಾಡಿ ಬಹಳ ಉತ್ತಮ ಕಾರ್ಯಕ್ರಮವಾಗಿದೆ. ಇದೊಂದು ಮಾದರಿ ವಿದ್ಯಾ ಸಂಸ್ಥೆಯಾಗಿದೆ. ಬಹಳಷ್ಟು ಪರಿಶ್ರಮದಿಂದ ಈ ವಿದ್ಯಾ ಸಂಸ್ಥೆ ಬೆಳೆದುನಿಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದರು.

ವಿಠಲ ವಿದ್ಯಾವರ್ದಕ ಸಂಘದ ಪ್ರಮುಖರಾದ ನಿತ್ಯಾನಂದ ನಾಯಕ್ ರವರು ಮಾತನಾಡಿ, ದೇಶ ಒಳ್ಳೆದಾಗಲು ಜನರು ವಿದ್ಯಾವಂತರು, ಆರೋಗ್ಯವಂತರಾಗಬೇಕು. ವಿದ್ಯೆ ಹಾಗೂ ಆರೋಗ್ಯ
ಎರಡನ್ನೂ ಈ ಜನಪ್ರಿಯ ಸಮೂಹ ಸಂಸ್ಥೆಗಳು ನೀಡುತ್ತದೆ. ದೇಶದ ಏಳಿಗೆಯಲ್ಲಿ ಇವರ ಪಾತ್ರ ಅನನ್ಯವಾದುದು. ಈ ನಿಟ್ಟಿನಲ್ಲಿ ನಮ್ಮ ಗ್ರಾಮಿಣ ಭಾಗದಲ್ಲಿ ಇಂತಹ ವಿದ್ಯಾಸಂಸ್ಥೆಯ ಹುಟ್ಟಾಗಿರುವುದು ಸಂತಸ ತಂದಿದೆ ಎಂದರು.

ಮಂಗಳೂರಿನ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಇಒ ಕಿರಾಶ್ ಪರ್ತಿಪ್ಪಾಡಿರವರು ಮಾತನಾಡಿ ಶಾಲೆ ನಮ್ಮ ಜೀವನದ ಅತೀ ಮುಖ್ಯ ಘಟ್ಟವಾಗಿದೆ. ಮನುಷ್ಯನಿಗೆ ಶಿಕ್ಷಣ ಅತೀ ಮುಖ್ಯ. ನಿಮ್ಮ ಯಶಸ್ಸಿನ ಮಟ್ಟಿಲು ಈ ವಿದ್ಯಾಸಂಸ್ಥೆಯಾಗಲಿ. ತಂತ್ರಜ್ಞಾನದ ಯುಗದಲ್ಲಿ ನಾವಿದ್ದೇವೆ. ಅದರ ಬಳಕೆ ಬಗ್ಗೆ ಆದಷ್ಟು ಜಾಗರೂಕತೆ ಅಗತ್ಯ. ಮಕ್ಕಳಿಗೆ ಮೊಬೈಲ್‌ನ ಬದಲು ಪುಸ್ತಕಗಳನ್ನು ಕೊಡುವ ಕೆಲಸ ಮಾಡಿ. ಮಕ್ಕಳಿಗೆ ಹುಟ್ಟಿದ ಹಬ್ಬಕ್ಕೆ ಬೆಲೆಬಾಳುವ ವಸ್ತುಗಳನ್ನು ಕೊಡುವ ಬದಲು ಪುಸ್ತಕಗಳನ್ನು ನೀಡಿ.‌ ಆ ಮೂಲಕ‌ ಅವರನ್ನು ಪುಸ್ತಕ ಓದುವಂತೆ ಮಾಡಿ ಎಂದರು. ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹಾಗೂ ವಿವಿಧ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.


ಮಂಗಳೂರು ಜನಪ್ರಿಯ ಆಸ್ಪತ್ರೆಯ ನಿರ್ದೇಶಕರು, ಕೀಲು ಮತ್ತು ಎಲುಬು ತಜ್ಞರಾದ‌ ಡಾ. ಮಹಮ್ಮದ್ ನೂಮನ್ , ಯುನೈಟೆಡ್ ನೇಷನ್ಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಡಾ. ರವಿ ಕುಮಾರ್ ಎಲ್.ಪಿ.,
ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಬದ್ರಿಯಾ, ಜನಪ್ರಿಯ ಶಾಲಾ ಅಧ್ಯಕ್ಷರಾದ ಫಾತಿಮ ನಸ್ರೀನ್ ಬಶೀರ್, ಜನಪ್ರಿಯ ಫೌಂಡೇಶನ್ ನ ನಿರ್ದೇಶಕರಾದ ಡಾ. ಮಹಮ್ಮದ್ ಶಫಾಕ್, ಶಾಮಿಕ್ ಅಬ್ದುಲ್ ರಹಮಾನ್, ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ನಿರ್ದೇಶಕರಾದ ನೌಶೀನ್ ಬದ್ರಿಯಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಲಿಜಿನ್ ಕ್ಸೇವಿಯರ್ ಶಾಲಾ‌ ವಾರ್ಷಿಕ ವರದಿ ವಾಚಿಸಿದರು.


ಶಾಲಾ ಆಡಳಿತಾಧಿಕಾರಿ ಸಫ್ಘಾನ್ ಪಿಲಿಕಲ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ವಂದಿಸಿದರು. ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ವಿವಿಧ ನೃತ್ಯ ವೈವಿಧ್ಯ ನಡೆಯಿತು.

ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಧ್ಯೇಯ

ನಮ್ಮ ಶಾಲೆ ಸಿಬಿಎಸ್.ಸಿ ಶಾಲೆಯಾಗಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಅದಕ್ಕೆಲ್ಲ ಮುಖ್ಯಕಾರಣ ಪೋಷಕ ಬಂಧುಗಳಾದ ತಾವುಗಳು. ಗ್ರಾಮೀಣ ಭಾಗದ ಮಕ್ಕಳಿಗೆ ಬೇಕಾದ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ‌ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಕೆಲಸ ಪ್ರತಿಯೊಂದೂ ಪೋಷಕರಿಂದ ಆಗಬೇಕಿದೆ. ಪೋಷಕರ ಮನಸ್ಸನ್ನು ಮಕ್ಕಳು ಜಯಿಸುವುದಲ್ಲ.ಮಕ್ಕಳ ಮನಸ್ಸನ್ನು ನಾವುಗಳು ಜಯಿಸುವ ಕೆಲಸವಾಗಬೇಕು. ಹಿರಿಯರ ಪ್ರೇರಣಿಯಂತೆ ಮುಂದುವರೆಯೋಣ. ಮುಂದಿ‌ ದಿನಗಳಲ್ಲಿ ಶಾಲೆಯಲ್ಲಿ ಸುಸಜ್ಜಿತವಾದ ಸಭಾಂಗಣ ಹಾಗೂ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡುವ ಯೋಚನೆಯಿದೆ. ಎಲ್ಲರ ಸಹಕಾರವನ್ನು ಕೋರುತ್ತಿದ್ದೇ‌ನೆ.

ಡಾ. ಅಬ್ದುಲ್ ಬಶೀರ್ ವಿ.ಕೆ., ಅಧ್ಯಕ್ಷರು, ಜನಪ್ರಿಯ ಫೌಂಡೇಶನ್

LEAVE A REPLY

Please enter your comment!
Please enter your name here