ಪುತ್ತೂರು : ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ವೈದ್ಯಕೀಯ ಶಿಬಿರ 35ನೇ ಶಿಬಿರವು ಫೆ.2ರಂದು ನಡೆಯಿತು.
ಶಿಬಿರವನ್ನು ಅನ್ನದಾನದ ಪ್ರಾಯೋಜಕಿ ಚಂದ್ರಾವತಿ ವಿಶ್ವನಾಥ ರೈ ಮುಕ್ರಂಪಾಡಿಯವರು ದೀಪ ಬೆಳಗಿಸಿ, ಉದ್ಘಾಟಿಸಿ ಶುಭಹಾರೈಸಿದರು. ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಅಧ್ಯಕ್ಷತೆ ವಹಿಸಿದ್ದರು. ನವಚೇತನ ಯುವಕ ಮಂಡಲದ ಕಾರ್ಯದರ್ಶಿ ಪ್ರವೀಣ್ ಕುಮಾರ್, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರಾದ ಲಕ್ಷ್ಮಣ್ ಬೈಲಾಡಿ, ಪ್ರೇಮ ಶಿವಪ್ಪ ಸಪಲ್ಯ, ಶಶಿಕಲಾ ನಿರಂಜನ ರೈ, ವಿನ್ಯಾಸ್ ಯು.ಎಸ್. ಉಪಸ್ಥಿತರಿದ್ದರು.
ತಜ್ಞರಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ, ನ್ಯೂರೋಪತಿ ಫೂಟ್ ರಿಪೋರ್ಟಿಂಗ್, ಮೂಳೆ ಸಾಂದ್ರತೆಯ ಪರೀಕ್ಷೆಗಳನ್ನು ನಡೆಸಿ ಔಷಧಿಗಳನ್ನು ಉಚಿತವಾಗಿ ವಿತರಿಸಿದರು. ವೈದ್ಯರಾದ ಡಾ.ಸುರೇಶ್ ಪುತ್ತೂರಾಯ, ಡಾ.ಪ್ರೀತಿರಾಜ್ ಬಲ್ಲಾಳ್, ಡಾ.ಗ್ರೀಷ್ಮಾ, ಡಾ.ಸಚಿನ್ ಶಂಕರ್ ಹಾರಕರೆ, ಡಾ.ಸಾಯಿಪ್ರಕಾಶ್, ಡಾ.ವೇಣುಗೋಪಾಲ ವೈದ್ಯಕೀಯ ತಪಾಸಣೆ ನಡೆಸಿದರು. ನ್ಯೂರೋಪತಿ ಫೂಟ್ ರಿಪೋರ್ಟಿಂಗ್ನಲ್ಲಿ ಅಮಿತ್ ಬಿ., ಮೂಳೆ ಸಾಂದ್ರತೆಯಲ್ಲಿ ಶಂಕರ್, ಕಾರ್ತಿಕ್, ಮಧುಮೇಹ ರಕ್ಷಪರೀಕ್ಷೆಯಲ್ಲಿ ಜಗದೀಶ್, ರಾಜ್ಕಿರಣ್, ಗಾಯತ್ರಿ ಹಾಗೂ ರುಕ್ಮಿಣಿ, ಔಷಧಿ ವಿತರಣೆಯಲ್ಲಿ ಅನಿಲ್ ಕಾಮತ್, ಕೃಷ್ಣಪ್ರಸಾದ್, ತೇಜ, ಮಧುಶ್ರೀ, ಹರಿಣಿ ಪುತ್ತೂರಾಯ, ನವಚೇತನ ಯುವಕ ಮಂಡಲ ಸಂಪ್ಯ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಐಕ್ಯ ಕಲಾ ಸೇವಾ ಟ್ರಸ್ಟ್ ಮೊಟ್ಟೆತ್ತಡ್ಕ, ಐಡಿಯಲ್ ಲ್ಯಾಬೊರೇಟರಿ ಪುತ್ತೂರು, ಮಹಾವೀರ ಆಸ್ಪತ್ರೆ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು ಪುತ್ತೂರು, ಉಷಾ ಸ್ಕ್ಯಾನ್ ಸೆಂಟರ್ ದರ್ಬೆ, ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ತೆಂಕಿಲ, ಹಲವು ಔಷಧಿ ಕಂಪೆನಿಗಳು ಹಾಗೂ ಭಕ್ತಾದಿಗಳು ಶಿಬಿರದಲ್ಲಿ ಸಹಕರಿಸಿದರು.
ಜಯಲಕ್ಷ್ಮಿ ಶಗ್ರಿತ್ತಾಯ ಪ್ರಾರ್ಥಿಸಿದರು. ಸಂತೋಷ್ ಮುಕ್ರಂಪಾಡಿ ಸ್ವಾಗತಿಸಿದರು, ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.