ಪುತ್ತೂರು:ಪುತ್ತೂರು ನಗರ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಲೋಕೇಶ್ ಗೌಡ ಪಡ್ಡಾಯೂರು ಹಾಗೂ ಕಾರ್ಯದರ್ಶಿಯಾಗಿ ವಿಕ್ಟರ್ ಪಾಯಸ್ ಅವರನ್ನು ನೇಮಕ ಮಾಡಲಾಗಿದೆ.
ಫೆ.2ರಂದು ಸುದಾನ ಹಾಲ್‌ನಲ್ಲಿ ನಡೆದ ಪಕ್ಷದ ವಲಯ ಪ್ರಮುಖರ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಪುತ್ತೂರು ಶಾಸಕರಾದ ಅಶೋಕ್ ರೈ ಅವರು ವಲಯ ಅಧ್ಯಕ್ಷರನ್ನಾಗಿ ಲೋಕೇಶ್ ಗೌಡ ಪಡ್ಡಾಯೂರು ಅವರ ಹೆಸರನ್ನು ಘೋಷಿಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕರು ವಲಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪ್ರತೀ ವಲಯದಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಲಾಗುತ್ತಿದೆ. ಸರಕಾರದ ಯೋಜನೆಗಳು ತಳಮಟ್ಟಕ್ಕೆ ತಲುಪಿದೆಯೇ ಎಂಬುದನ್ನು ಪ್ರತೀಯೊಬ್ಬ ಕಾರ್ಯಕರ್ತರೂ ತಿಳಿದುಕೊಳ್ಳಬೇಕು. ನೊಂದವರಿಗೆ ಸಹಾಯ ಮಾಡುವ ಮೂಲಕ ಜನರ ಪ್ರೀತಿಗಳಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವರವರು ಮಾತನಾಡಿ, ನಗರ ವಲಯ ಕಾಂಗ್ರೆಸ್‌ಗೆ ನೂತನ ಪದಾಧಿಕಾರಿಗಳ ಘೋಷಣೆಯಾಗಿದೆ. ಮುಂದೆ ಬೂತ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕ ನಡೆಯಲಿದೆ. ಶಾಸಕ ಅಶೋಕ್ ರೈ ಅವರ ಅಭಿವೃದ್ದಿ ಕೆಲಸಗಳಿಗೆ ಜನರಿಂದ ಪೂರ್ಣ ಬೆಂಬಲ ವ್ಯಕ್ತವಾಗುತ್ತಿದೆ. ಮುಂದಿನ 25 ವರ್ಷಗಳ ಕಾಲ ಪುತ್ತೂರಿನಲ್ಲಿ ಅಶೋಕ್ ರೈ ಅವರೇ ಶಾಸಕರಾಗುವ ನಿಟ್ಟಿನಲ್ಲಿ ಪ್ರತೀಯೊಬ್ಬ ಕಾರ್ಯಕರ್ತರೂ ಶ್ರಮವಹಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರೂನ್ ಸಿಕ್ವೆರಾ, ನಗರಸಭಾ ಸದಸ್ಯರಾದ ದಿನೇಶ್ ಶೇವಿರೆ, ಬೂತ್ ಅಧ್ಯಕ್ಷರಾದ ರಾಮಚಂದ್ರ ನಾಯಕ್, ನವಾಝ್, ಕೃಷ್ಣಪ್ಪ, ಮನೋರಮಾ, ಅಶೋಕ್ ಪಾಯಸ್, ಜಯಂತ ಕಾರೆಕ್ಕಾಡು, ಗಣೇಶ್ ಕಾರೆಕ್ಕಾಡು, ಮನೋಹರ್ ಕಾರೆಕ್ಕಾಡು, ಲೋಕೇಶ್ ಕಾರೆಕ್ಕಾಡು, ಪ್ರಮೋದ್ ಮಾಲ್ತೊಟ್ಟು, ಶೇಖರ್ ಪಡ್ಡಾಯೂರು, ರಾಜೇಶ್ ಪಡ್ಡಾಯೂರು, ತೇಜಸ್ ಪಡ್ಡಾಯೂರು ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂಣೇಶ್ ಕುಮಾರ್ ಭಂಡಾರಿ ಸ್ವಾಗತಿಸಿ, ವಂದಿಸಿದರು.